ಕರ್ನಾಟಕ

karnataka

ETV Bharat / state

ಧರ್ಮೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ತೆರಳಿರುವ ಸಿಎಂ ಬಿಎಸ್​ವೈ - CM B.S Yaduyurappa

ಮಧ್ಯಾಹ್ನ 2.30ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣಿಸಲಿರುವ ಸಿಎಂ, 3.30ಕ್ಕೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದ ಕಲ್ಮರುಡೇಶ್ವರ ಪ್ರೌಢ ಶಾಲೆಯ ಹೆಲಿಪ್ಯಾಡ್​​ಗೆ ಬಂದಿಳಿಯಲಿದ್ದಾರೆ..

CM B.S Yaduyurappa
ಧರ್ಮೇಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ತೆರಳಿರುವ ಸಿಎಂ

By

Published : Dec 29, 2020, 12:02 PM IST

ಬೆಂಗಳೂರು :ಇಂದು ನಿಧನ ಹೊಂದಿದ ಉಪಸಭಾಪತಿ ಎಸ್​ ಎಲ್ ಧರ್ಮೇಗೌಡರ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪಿಳ್ಳೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾರೆ.

ಮಧ್ಯಾಹ್ನ 2.30ಕ್ಕೆ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಪ್ರಯಾಣಿಸಲಿರುವ ಸಿಎಂ, 3.30ಕ್ಕೆ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದ ಕಲ್ಮರುಡೇಶ್ವರ ಪ್ರೌಢ ಶಾಲೆಯ ಹೆಲಿಪ್ಯಾಡ್​​ಗೆ ಬಂದಿಳಿಯಲಿದ್ದಾರೆ.

ಓದಿ:ಶಿವಮೊಗ್ಗ ಸಿಮ್ಸ್ ಶವಾಗಾರಕ್ಕೆ ಧರ್ಮೇಗೌಡರ ಮೃತದೇಹ ರವಾನೆ

ಬಳಿಕ ಸಂಜೆ 4.30ಕ್ಕೆ ಕಲ್ಮರುಡೇಶ್ವರ ಪ್ರೌಢಶಾಲೆ ಹೆಲಿಪ್ಯಾಡ್‌ನಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ಸಂಜೆ 5.30ಕ್ಕೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಲಿದ್ದಾರೆ.

ABOUT THE AUTHOR

...view details