ಕರ್ನಾಟಕ

karnataka

ETV Bharat / state

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೊದಲ ಕಂತು ಪಾವತಿ: ಮೋದಿಗೆ ಧನ್ಯವಾದ ಹೇಳಿದ ಬಿಎಸ್​ವೈ

ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 52.50 ಲಕ್ಷ ರೈತರ ಖಾತೆಗಳಿಗೆ 1049ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಇಂದು ಜಮಾ ಮಾಡಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

CM B.S. Yaduyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Aug 9, 2020, 12:39 PM IST

ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯಡಿ ಇಂದು ಮೊದಲ ಕಂತು ರೈತರ ಖಾತೆಗೆ ಜಮೆಯಾಗುತ್ತಿದ್ದು, ರಾಜ್ಯದ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಿ.ಎಂ. ಕಿಸಾನ್ ಯೋಜನೆಗಾಗಿ ನನ್ನ ಧನ್ಯವಾದ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಜ್ಯದ 52.50 ಲಕ್ಷ ರೈತರ ಖಾತೆಗಳಿಗೆ 1,049ಕೋಟಿ ರೂ.ಗಳನ್ನು ಮೊದಲ ಕಂತಿನಲ್ಲಿ ಇಂದು ಜಮಾ ಮಾಡಲಾಗುತ್ತಿದೆ. ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಯೋಜನೆ ಪರಿಣಾಮಕಾರಿಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೃಷಿ ಮೂಲಸೌಕರ್ಯ ನಿಧಿಯಡಿ 1 ಲಕ್ಷ ಕೋಟಿ ಬಿಡುಗಡೆ ಮಾಡಲಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಪಾವತಿಸುವ ಪಿಎಂ-ಕಿಸಾನ್ ಯೋಜನೆಯಡಿ 8.5 ಕೋಟಿ ರೈತರಿಗೆ ₹17,000 ಕೋಟಿಗಳನ್ನು ಬಿಡುಗಡೆ ಮಾಡಲಿದ್ದಾರೆ‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ‌.

ABOUT THE AUTHOR

...view details