ಬೆಂಗಳೂರು:ಕೋವಿಡ್-19 ನಂತಹ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಮುಂದೆ ಬಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿಲುವು ಅಭಿನಂದನಾರ್ಹವಾಗಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದ್ದಾರೆ.
ಕೋವಿಡ್- 19 ಮೂರನೇ ಹಂತದ ಕೋವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ ನೀಡಿದ ಸಿಎಂ... - CM BS Y inaguarates the Corona Vaccine 3rd Phase at bengalore
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 'ಕೋವ್ಯಾಕ್ಸಿನ್' ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಇವತ್ತು ಚಾಲನೆ ನೀಡಿದ್ದಾರೆ. ಇದರ ಪ್ರಯೋಗವು ಬೆಂಗಳೂರಿನ ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ ಮತ್ತು ರಿಸರ್ಚ್ ಸೆಂಟರ್ನಲ್ಲಿ ಆರಂಭವಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುಯಲ್ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಕೊರೊನಾ ವ್ಯಾಕ್ಸಿನ್ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಎಂ, ಕೊರೊನಾದಿಂದ ಇಡೀ ಜಗತ್ತು ತತ್ತರಿಸುತ್ತಿದೆ. ಇದಕ್ಕೆ ದೇಶ, ರಾಜ್ಯ ಕೂಡ ಹೊರತಲ್ಲ. ಈ ಹಂತದಲ್ಲಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಅತ್ಯಂತ ಮಹತ್ವದ್ದಾಗಿದೆ. ಇದು ದೇಶದ ಆರೋಗ್ಯ ಕ್ಷೇತ್ರದ ಸವಾಲು ಎದುರಿಸಲು ಸಹಕಾರಿಯಾಗಲಿದೆ. ಇದು ದೇಶದ ಆರೋಗ್ಯ ಸುರಕ್ಷತೆಗೆ ಉಪಯೋಗಕರವಾಗಿದೆ. ಅಲ್ಲದೇ ಕೊರೊನಾ ಲಸಿಕೆ ಅಭಿವೃದ್ಧಿ ದೇಶದ ಭವಿಷ್ಯದಲ್ಲಿ ಎದುರಾಗುವ ಪಿಡುಗುಗಳನ್ನು ಎದುರಿಸಲು ಸಹಕಾರಿಯಾಗಿದೆ ಎಂದರು.