ಕರ್ನಾಟಕ

karnataka

ETV Bharat / state

ಶಾಂತಿಯುತವಾಗಿ ನೆರವೇರಿದ ಪುನೀತ್ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ ಮೆಚ್ಚುಗೆ - ಶಿವರಾಜ್ ಕುಮಾರ್ ಅವರ ಕೃತಜ್ಞತೆ ಅವರ ಮತ್ತು ದೊಡ್ಮನೆಯ ದೊಡ್ಡ ಗುಣ

ಪುನೀತ್ ರಾಜ್​​ಕುಮಾರ್ ನಿಧನದ ನಂತರ ಕಳೆದ ಮೂರು ದಿನಗಳಿಂದ ಮೃತದೇಹದ ಸಾರ್ವಜನಿಕ ದರ್ಶನಕ್ಕೆ ಸಕಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಈ ವೇಳೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಪೊಲೀಸರ ಶ್ರಮ ಮತ್ತು ಕಾರ್ಯಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

CM bommai
ಸಿಎಂ ಬೊಮ್ಮಾಯಿ

By

Published : Oct 31, 2021, 12:22 PM IST

Updated : Oct 31, 2021, 12:38 PM IST

ಬೆಂಗಳೂರು: ಪವರ್​​ ಸ್ಟಾರ್​​ ಪುನೀತ್ ರಾಜ್​​ಕುಮಾರ್ ಮೃತದೇಹದ ಅಂತಿಮ ದರ್ಶನ ಹಾಗು ಅಂತಿಮ ವಿಧಿ ವಿಧಾನಗಳು ಅತ್ಯಂತ ಶಾಂತಿಯುತವಾಗಿ ನೆರವೇರಿವೆ. ಇದಕ್ಕೆ ಕಾರಣರಾದ ಪೊಲೀಸ್, ಬಿಬಿಎಂಪಿ ಹಾಗು ಇತರೆ ಇಲಾಖೆ ಅಧಿಕಾರಿಗಳು, ಅತ್ಯಂತ ಶಾಂತರೀತಿಯಲ್ಲಿ ವರ್ತಿಸಿದ ಪುನೀತ್ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧನ್ಯವಾದ ಅರ್ಪಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಪುನೀತ್ ರಾಜ್​​ಕುಮಾರ್ ನಿಧನದ ನಂತರ ಕಳೆದ ಮೂರು ದಿನಗಳಿಂದ ಮೃತದೇಹದ ಸಾರ್ವಜನಿಕ ದರ್ಶನಕ್ಕೆ ಸಕಲ ವ್ಯವಸ್ಥೆ ಬಗ್ಗೆ ಪೊಲೀಸರು, ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಈ ವೇಳೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು, ಪೊಲೀಸರ ಶ್ರಮ ಮತ್ತು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪುನೀತ್ ಅಭಿಮಾನಿಗಳು ಶಿಸ್ತು, ಸಂಯಮ, ಶಾಂತಿಯಿಂದ ನಡೆದುಕೊಂಡಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ. ಎಂಥದ್ದೇ ಸಂದರ್ಭದಲ್ಲೂ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಸರ್ಕಾರ ತನ್ನ ಕರ್ತವ್ಯ ನಿಭಾಯಿಸಿದೆ. ನಮ್ಮ‌ ಅಧಿಕಾರಿಗಳು ಸಹಕಾರ ಕೊಟ್ಟಿದ್ದಾರೆ. ಇದು ಸರ್ಕಾರ, ಅಧಿಕಾರಿಗಳ ಕರ್ತವ್ಯ ಆಗಿತ್ತು ಎಂದರು.

ಇದೇ ವೇಳೆ, ರಾಜ್​​ಕುಮಾರ್ ಕುಟುಂಬದವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರ ಕುಟುಂಬದವರಿಗೂ ಧನ್ಯವಾದ ಅರ್ಪಿಸಿದ ಸಿಎಂ, ಶಿವರಾಜ್ ಕುಮಾರ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಅದು ಅವರ ದೊಡ್ಮನೆಯ ದೊಡ್ಡ ಗುಣ ಎಂದು ಹೇಳಿದರು.

ಇದನ್ನೂ ಓದಿ:ನನ್ನ ಮಗುವನ್ನ ಕಳೆದುಕೊಂಡಿದ್ದೀನಿ.. ಅಂತ್ಯಕ್ರಿಯೆ ಬಳಿಕ ಶಿವಣ್ಣನ ಭಾವುಕ ನುಡಿ

Last Updated : Oct 31, 2021, 12:38 PM IST

ABOUT THE AUTHOR

...view details