ಕರ್ನಾಟಕ

karnataka

ETV Bharat / state

3ನೇ ಸ್ಥಾನಕ್ಕೆ ಕಡೆಯವರೆಗೂ ಕಾಯಬೇಕು, ನಮಗೇ ಗೆಲುವು: ಸಿಎಂ ಬೊಮ್ಮಾಯಿ

ಬಿಜೆಪಿ ಶಾಸಕಾಂಗ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಮ್ಮ ಪಕ್ಷದ ಇಬ್ಬರು, ಕಾಂಗ್ರೆಸ್​ನ ಒಬ್ಬರ ಗೆಲುವು ಅನಾಯಾಸವಾಗಿ ಆಗಲಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಯಾರೊಬ್ಬರೂ ಅಗತ್ಯ ಸಂಖ್ಯೆ ಹೊಂದಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ. ಎಲಿಮಿನೇಟ್ ಆದವರ ಮತಗಳು ವರ್ಗಾವಣೆಯಾಗಲಿದೆ ಎಂದರು.

ಮೂರನೇ ಸ್ಥಾನಕ್ಕೆ ಕಡೆಯವರೆಗೂ ಕಾಯಬೇಕು ಆದರೂ ನಮಗೇ ಗೆಲುವು ಎಂದ ಸಿಎಂ ಬೊಮ್ಮಾಯಿ
ಮೂರನೇ ಸ್ಥಾನಕ್ಕೆ ಕಡೆಯವರೆಗೂ ಕಾಯಬೇಕು ಆದರೂ ನಮಗೇ ಗೆಲುವು ಎಂದ ಸಿಎಂ ಬೊಮ್ಮಾಯಿ

By

Published : Jun 8, 2022, 9:55 PM IST

ಬೆಂಗಳೂರು: ರಾಜ್ಯಸಭೆ ಚುನಾವಣೆ ಯಾವ್ಯಾವಾಗ ನಡೆದಿದೆಯೋ ಆಗೆಲ್ಲಾ ಪಕ್ಷಗಳಲ್ಲಿ ಏರುಪೇರು ಆಗಿದೆ, ಇವತ್ತು ಹೀಗೇ ಆಗಲಿದೆ ಎಂದು ಹೇಳುವುದು ಕಷ್ಟ. ಚುನಾವಣೆ ಪ್ರಕ್ರಿಯೆ ನಡೆಯುವ ಮಧ್ಯೆ ಬಹಳಷ್ಟು ಬದಲಾವಣೆಗಳು ಆಗಲಿವೆ. ಹಾಗಾಗಿ ಕಡೆಯವರೆಗೂ ನಾವು ಕಾಯಬೇಕು. ಆದರೂ ನಮಗೆ ಹೆಚ್ಚಿನ ಮತಗಳಿರುವ ಕಾರಣ ನಮ್ಮ ಮೂರನೇ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕಾಂಗ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಇಬ್ಬರು, ಕಾಂಗ್ರೆಸ್​ನ ಒಬ್ಬರ ಗೆಲುವು ಅನಾಯಾಸವಾಗಿ ಆಗಲಿದೆ. ಆದರೆ, ನಾಲ್ಕನೇ ಸ್ಥಾನಕ್ಕೆ ಯಾರೊಬ್ಬರೂ ಅಗತ್ಯ ಸಂಖ್ಯೆ ಹೊಂದಿಲ್ಲ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ. ಎಲಿಮಿನೇಟ್ ಆದವರ ಮತಗಳು ವರ್ಗಾವಣೆಯಾಗಲಿದೆ. ಇವತ್ತಿನ ರಾಜಕೀಯ ಸ್ಥಿತಿಗತಿಗಳನ್ನು ನೋಡಿದಾಗ ನಮಗೆ 32 ಮತಗಳು ಹೆಚ್ಚಿದ್ದು, ಎರಡನೇ ಪ್ರಾಶಸ್ತ್ಯದ ಮತಗಳೂ ಹೆಚ್ಚಿವೆ. ಹಾಗಾಗಿ ನಮ್ಮ ಮೂರನೇ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.

ಯಾವುದೇ ರೀತಿಯ ಹೊಂದಾಣಿಕೆ ಮೇಲೆ ನಾವು ನಿಂತಿಲ್ಲ,ಯಾರ್ಯಾರ ನಡುವೆ ಹೊಂದಾಣಿಕೆ ಆಗಲಿದೆ, ಏನಾಗಲಿದೆ ಎಂದು ಕಾದುನೋಡಿ. ಯಾರು ಯಾರನ್ನು ಬೇಕಾದರೂ ಭೇಟಿಯಾಗಬಹುದು ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 376 ಮಂದಿಗೆ ಕೋವಿಡ್​ ಸೋಂಕು ದೃಢ: ಸಾವಿನ ಸಂಖ್ಯೆ ಶೂನ್ಯ

For All Latest Updates

TAGGED:

ABOUT THE AUTHOR

...view details