ಕರ್ನಾಟಕ

karnataka

By

Published : Aug 8, 2021, 5:08 PM IST

ETV Bharat / state

ಬಯೋಕಾನ್ ಭೋಜನಕೂಟದಲ್ಲಿ ಸಿಎಂ ಭಾಗಿ: ಮುಂದಿನ ಯೋಜನೆಗಳ ಸುದೀರ್ಘ ಸಮಾಲೋಚನೆ

ಕೋವಿಡ್ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನೇಕ ಸಂಸ್ಥೆಗಳು ಮುಚ್ಚಿವೆ. ಇನ್ನೂ ಸಾಕಷ್ಟು ಸಂಸ್ಥೆಗಳು ಆರ್ಥಿಕ ದುಸ್ಥಿತಿಗೆ ಒಳಗಾಗಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಒಂದಿಷ್ಟು ಹೊಸ ಸ್ಟಾರ್ಟಪ್‌ಗಳು ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸುತ್ತಿವೆ.

CM Basavaraja Bommai with Wipro President Azim Prem G
ಬಯೋಕಾನ್ ಭೋಜನಕೂಟದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಬೆಂಗಳೂರು: ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್​ ಮುಜುಂದಾರ್ ಷಾ ಬೆಂಗಳೂರಿನ ದಿ ಒಬೆರಾಯ್ ಹೋಟೆಲ್​ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.

ಬಯೋಕಾನ್ ಭೋಜನಕೂಟದಲ್ಲಿ ಸಿಎಂ ಬೊಮ್ಮಾಯಿ ಭಾಗಿ

ಭೋಜನಕೂಟದಲ್ಲಿ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್ ಜಿ, ಮೋಹನ್ ದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತಿತರರು ಇದ್ದರು. ಹಾಗೆಯೇ ಐಟಿ ದಿಗ್ಗಜ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಇವರೊಂದಿಗೆ ಸಿಎಂ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ನಿರಂತರ ಮೂರು ಗಂಟೆಗಳ ಕಾಲಾವಧಿಯ ಈ ಭೋಜನಕೂಟದಲ್ಲಿ ಮುಂಬರುವ ದಿನಗಳಲ್ಲಿ ಸರ್ಕಾರ ಕೈಗೊಳ್ಳಬಹುದಾದ ಯೋಜನೆಗಳ ರೂಪುರೇಷೆಯ ಚರ್ಚೆ ನಡೆದಿದೆ. ಐಟಿ ದಿಗ್ಗಜ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಪರಾಮರ್ಶೆ ನಡೆದಿದೆ. ರಾಜ್ಯ ಸರ್ಕಾರಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ತೆರಿಗೆ ಹರಿಸುತ್ತಿರುವ ಸಂಸ್ಥೆಗಳಿಂದಾಗಿ ಎದುರಿಸುವ ಸಮಸ್ಯೆಗಳ ಕುರಿತು ಇಲ್ಲಿ ಗಂಭೀರ ಮಾತುಕತೆ ನಡೆದಿದೆ.

ಹೊಸ ಸ್ಟಾರ್ಟಪ್ ಕಂಪನಿಗಳು ಕಾರ್ಯಾರಂಭ: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಮುಚ್ಚಿವೆ. ಇನ್ನೂ ಸಾಕಷ್ಟು ಸಂಸ್ಥೆಗಳು ಆರ್ಥಿಕ ದುಸ್ಥಿತಿಗೆ ಒಳಗಾಗಿವೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಒಂದಿಷ್ಟು ಹೊಸ ಸ್ಟಾರ್ಟಪ್ ಕಂಪನಿಗಳು ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸುತ್ತಿವೆ. ಸಮಸ್ಯೆ ಎದುರಿಸುತ್ತಿರುವ ಹಾಗೂ ಮುಂಬರುವ ದಿನಗಳಲ್ಲಿ ಕಾರ್ಯಾರಂಭ ಮಾಡುವ ಸಂಸ್ಥೆಗಳಿಗೆ ಸರ್ಕಾರದಿಂದ ನೀಡಬಹುದಾದ ಸಹಕಾರಗಳ ಕುರಿತು ಇದೇ ಸಂದರ್ಭ ಮಹತ್ವದ ಚರ್ಚೆ ನಡೆದಿದೆ.

ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ: ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆಗಳ ಮುಖ್ಯಸ್ಥರು ನೀಡಿದ ಮಾಹಿತಿ ವಿವರಣೆ ಹಾಗೂ ಸಲಹೆ ಸೂಚನೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸದಾಗಿ ಆರಂಭವಾಗುವ ಕಂಪನಿಗಳಿಗೆ ನಿವೇಶನ, ಸರ್ಕಾರದ ಪ್ರೋತ್ಸಾಹ, ತೆರಿಗೆ ವಿನಾಯಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಗಮನಹರಿಸುತ್ತೇನೆ ಎಂದಿದ್ದಾರೆ. ಇದಲ್ಲದೆ ಆರ್ಥಿಕ ದುಸ್ಥಿತಿಯಲ್ಲಿರುವ ಕಂಪನಿಗಳಿಗೆ ಎಷ್ಟರಮಟ್ಟಿನ ಸಹಕಾರವನ್ನು ಸರ್ಕಾರದಿಂದ ನೀಡಬಹುದು ಎನ್ನುವುದನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಇನ್ನೊಮ್ಮೆ ತಮ್ಮೊಂದಿಗೆ ಸಮಾಲೋಚಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್​ ಗಾತ್ರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ

For All Latest Updates

TAGGED:

ABOUT THE AUTHOR

...view details