ಕರ್ನಾಟಕ

karnataka

ETV Bharat / state

ಪ್ರತ್ಯೇಕವಾಗಿ ಬಿಎಸ್​​ವೈ, ಕಟೀಲು ಭೇಟಿ ಮಾಡಿ ಚರ್ಚಿಸಿದ ಸಿಎಂ ಬೊಮ್ಮಾಯಿ! - ಪಕ್ಷದ ರಾಜ್ಯ ನಾಯಕರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಜನವರಿ 23 ರಂದು ಸುಭಾಶ್ ಚಂದ್ರ ಬೋಸ್ ಅವರ ಜಯಂತಿ‌ ಆಚರಣೆ ಹಾಗು ವಿಶೇಷ ಮತ್ತು ವಿಶಿಷ್ಠವಾಗಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ಪಕ್ಷದ ನಾಯಕರ ಜೊತೆ ಸಿಎಂ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಪ್ರತ್ಯೇಕವಾಗಿ ಬಿಎಸ್​​ವೈ, ಕಟೀಲು ಭೇಟಿ ಮಾಡಿ ಚರ್ಚಿಸಿದ ಸಿಎಂ ಬೊಮ್ಮಾಯಿ!
ಪ್ರತ್ಯೇಕವಾಗಿ ಬಿಎಸ್​​ವೈ, ಕಟೀಲು ಭೇಟಿ ಮಾಡಿ ಚರ್ಚಿಸಿದ ಸಿಎಂ ಬೊಮ್ಮಾಯಿ!

By

Published : Jan 19, 2022, 11:43 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪಕ್ಷದ ರಾಜ್ಯ ನಾಯಕರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ಖಾಸಗಿ ನಿವಾಸದಿಂದ ರೇಸ್ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ತೆರಳಿದ ಬಸವರಾಜ ಬೊಮ್ಮಾಯಿ, ಅಲ್ಲಿ ಕೆಲ ಮುಖಂಡರ ಜೊತೆ ಚರ್ಚಿಸಿದ್ದಾರೆ. ಇದಾದ ಬಳಿಕ ದಿಢೀರ್​​ ಆಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.

ಈ ಚರ್ಚೆ ಸಾಕಷ್ಟು ಕುತೂಹಲ ಮೂಡಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಕಚೇರಿಗೆ ತೆರಳಿದ ಮುಖ್ಯಮಂತ್ರಿಗಳು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಸಮಾಲೋಚಿಸಿದ್ದಾರೆ. ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರ ಜೊತೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಕ್ಷದ ಪ್ರಧಾನ ಕಾರ್ಯದರ್ಶಿ , ಸಂಘಟನಾ ಕಾರ್ಯದರ್ಶಿ ಸೇರಿದಂತೆ ಪ್ರಮುಖರ ಜೊತೆ ಚರ್ಚೆ ಮಾಡಿದ್ದಾರೆ.

ಜನವರಿ 23 ರಂದು ಸುಭಾಶ್ ಚಂದ್ರ ಬೋಸ್ ಅವರ ಜಯಂತಿ‌ ಆಚರಣೆ ಹಾಗು ವಿಶೇಷ ಮತ್ತು ವಿಶಿಷ್ಠವಾಗಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ಪಕ್ಷದ ನಾಯಕರ ಜೊತೆ ಸಿಎಂ ಈ ಭೇಟಿ ಸಂದರ್ಭ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜತೆ ಚರ್ಚಿಸಿದ ಬಳಿಕ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಅರುಣ್ ಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿಎಸ್​ವೈ ಹಾಗೂ ನಳಿನ್ ಕುಮಾರ್ ಕಟೀಲು ಜೊತೆ ಪ್ರತ್ಯೇಕವಾಗಿ ಅವರಿರುವ ಸ್ಥಳಕ್ಕೆ ತೆರಳಿ ಸಿಎಂ ಚರ್ಚೆ ನಡೆಸಿರುವುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಚರ್ಚೆ ಯಾವ ವಿಚಾರದ ಮೇಲೆ ನಡೆದಿದೆ ಎಂಬ ಕುರಿತು ಇದುವರೆಗೂ ಯಾವ ನಾಯಕರೂ ಸ್ಪಷ್ಟ ಮಾಹಿತಿ ನೀಡಿಲ್ಲ.

For All Latest Updates

ABOUT THE AUTHOR

...view details