ಕರ್ನಾಟಕ

karnataka

ETV Bharat / state

ಚೊಚ್ಚಲ ಬಜೆಟ್​ಗೆ ಸಿದ್ಧತೆ: ತೆರಿಗೆ ಸಂಗ್ರಹ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ - CM Basavaraj Bommai

ಮುಂದಿನ ವರ್ಷ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಸಿಎಂ ಬೊಮ್ಮಾಯಿ ಮಾಹಿತಿ ಸಂಗ್ರಹಿಸಿದರು. ತೆರಿಗೆ ಸಂಗ್ರಹಣ ಇಲಾಖೆಗಳ ಪರಿಶೀಲನಾ ಸಭೆ ನಡೆಸಿ 6 ಇಲಾಖೆಗಳ ತೆರಿಗೆ ಸಂಗ್ರಹ ಕುರಿತು ಸಮಾಲೋಚನೆ ನಡೆಸಿದರು.

CM Basavaraj Bommai
ಬಸವರಾಜ ಬೊಮ್ಮಾಯಿ

By

Published : Dec 8, 2021, 8:15 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದು, ತೆರಿಗೆ ಸಂಗ್ರಹ ಸ್ಥಿತಿಗತಿ ಕುರಿತು ಇಂದು ಪರಾಮರ್ಶೆ ನಡೆಸಿದರು. ಕೋವಿಡ್ 19 ನಡುವೆಯೂ ಬೊಕ್ಕಸಕ್ಕೆ ಆದಾಯ ಹೆಚ್ಚಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಕರೆದಿದ್ದರು. ಮುಂದಿನ ವರ್ಷ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ತೆರಿಗೆ ಸಂಗ್ರಹಣ ಇಲಾಖೆಗಳ ಪರಿಶೀಲನಾ ಸಭೆ ನಡೆಸಿ 6 ಇಲಾಖೆಗಳ ತೆರಿಗೆ ಸಂಗ್ರಹ ಕುರಿತು ಸಮಾಲೋಚಿಸಿದರು.

ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಿದ್ದು, 6 ಇಲಾಖೆಗಳ ತೆರಿಗೆ ಸಂಗ್ರಹ ಹೇಗಿದೆ ಎಂದು ಖುದ್ದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲಾ ಇಲಾಖೆಗಳಿಗೂ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್ ನೀಡಿದ ಸಿಎಂ, ಯಾವುದೇ ಕಾರಣಕ್ಕೂ ತೆರಿಗೆ ಸಂಗ್ರಹ ಕುಂಠಿತಗೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ:ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ: ಸಚಿವ ಅಶೋಕ್ ಘೋಷಣೆ

ABOUT THE AUTHOR

...view details