ಕರ್ನಾಟಕ

karnataka

ETV Bharat / state

ಯಾವುದೇ ವರ್ಗಾವಣೆ ಪ್ರಸ್ತಾವನೆ ಸಲ್ಲಿಸದಂತೆ ಸಿಎಂ ಬೊಮ್ಮಾಯಿ‌ ಸೂಚನೆ - ಲೋಕೋಪಯೋಗಿ ಇಲಾಖೆ

ವರ್ಗಾವಣೆ ಅವಧಿ ಮುಕ್ತಾಯ- ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸಬೇಡಿ- ಸಿಎಂ ಬೊಮ್ಮಾಯಿ ಖಡಕ್​ ಸೂಚನೆ‌‌

CM Bommai
ಸಿಎಂ ಬೊಮ್ಮಾಯಿ‌

By

Published : Dec 24, 2022, 7:31 PM IST

ಬೆಂಗಳೂರು: ಸದ್ಯ ಯಾವುದೇ ವರ್ಗಾವಣೆ ಪ್ರಸ್ತಾವನೆಗಳನ್ನು ಸಲ್ಲಿಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ‌‌ ನೀಡಿದ್ದಾರೆ.

ಈಗಾಗಲೇ ವರ್ಗಾವಣೆ ಅವಧಿ ಮುಕ್ತಾಯಗೊಂಡಿರುವುದರಿಂದ ಹಾಗೂ ಸನಿಹದಲ್ಲಿಯೇ ಆಯವ್ಯಯ ಅಧಿವೇಶನ, ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ಇರುವುದರಿಂದ, ಈ ಹಂತದಲ್ಲಿ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಪ್ರಸ್ತಾವನೆಗಳನ್ನು ಸಲ್ಲಿಸದೇ ಇರಲು ಸೂಚಿಸಿದ್ದಾರೆ.

ಹಾಗೆ ಸ್ಥಳ ನಿರೀಕ್ಷಣೆಯಲ್ಲಿರುವವರಿಗೆ ಖಾಲಿ ಹುದ್ದೆಗಳಿಗೆ ಸ್ಥಳ ನಿಯುಕ್ತಿ ಪ್ರಸ್ತಾವನೆಗಳನ್ನು ಸಚಿವರ ಹಂತದಲ್ಲಿಯೇ ಕೈಗೊಳ್ಳಲು ಸಹ ಆದೇಶಿಸಿದ್ದಾರೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯ ಜಾಹೀರಾತು ಹೋರ್ಡಿಂಗ್ಸ್‌ಗೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್

ABOUT THE AUTHOR

...view details