ಬೆಂಗಳೂರು: ಬೆಂಗಾವಲು ಪಡೆಯೊಂದಿಗೆ ಪ್ರಧಾನಮಂತ್ರಿ ಫ್ಲೈಓವರ್ನಲ್ಲಿ ಸಿಲುಕಿಕೊಳ್ಳುವುದು ಸಹಜ ಎನ್ನುವುದಾದರೆ, ಪಂಜಾಬ್ ತನ್ನ ಭವಿಷ್ಯದ ಬಗ್ಗೆ ನಿಜವಾಗಿಯೂ ಚಿಂತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರು ತೆರಳುವ ಮಾರ್ಗದಲ್ಲಿ ಅಡಚಣೆಯಾಗಿದ್ದು, ಭದ್ರತಾ ಲೋಪದಿಂದ ಮೋದಿ ಅವರ ಬೆಂಗಾವಲು ಪಡೆ ಫ್ಲೈಓವರ್ನಲ್ಲೇ ಸಿಲುಕಿ 20 ನಿಮಿಷ ಕಾಲ ಕಳೆಯುವಂತೆ ಮಾಡಿದ ಘಟನೆಯನ್ನು ನಾವು ಖಂಡಿಸುತ್ತೇವೆ. ಆದರೆ ಇದು ಸಹಜ ಘಟನೆ ಎಂದು ಹೇಳಿರುವ ಅಲ್ಲಿನ ಮುಖ್ಯಮಂತ್ರಿ ಚರಣ್ ಜೀತ್ ಚನ್ನಿ ಅವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದು ಸಿಎಂ ಹೇಳಿದ್ದಾರೆ.