ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯರ ಫೋಟೋ ಕ್ಲಿಕ್ಕಿಸಿದ ಸಿಎಂ ಬೊಮ್ಮಾಯಿ‌.. - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಕುಮಾರಪಾರ್ಕ್​ನಲ್ಲಿರುವ ಚಿತ್ರಕಲಾ ಪರಿಷತ್​ನಲ್ಲಿ ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಉದ್ಘಾಟಿಸಿದರು.

CM Bommai clicked Siddaramayya Photo
ಸಿದ್ದರಾಮಯ್ಯ ಫೋಟೋ ಕ್ಲಿಕ್ಕಿಸಿದ ಸಿಎಂ ಬೊಮ್ಮಾಯಿ‌

By

Published : Oct 27, 2022, 12:49 PM IST

ಬೆಂಗಳೂರು:ಚಿತ್ರಕಲಾ ಪರಿಷತ್​ನಲ್ಲಿ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಫೋಟೋವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕ್ಲಿಕ್ಕಿಸಿದ್ದಾರೆ.

ಕುಮಾರ ಪಾರ್ಕ್​ನಲ್ಲಿರುವ ಚಿತ್ರಕಲಾ ಪರಿಷತ್​ನಲ್ಲಿ ಬೆಂಗಳೂರು ಪತ್ರಿಕಾ ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಉದ್ಘಾಟಿಸಿದರು. ನಂತರ ಕ್ಯಾಮರಾವನ್ನು ಹೆಗಲಿಗೇರಿಸಿಕೊಂಡು ಛಾಯಾಚಿತ್ರಗಳನ್ನು ಕುತೂಹಲದಿಂದ ವೀಕ್ಷಿಸಿದರು. ಇದರಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಫೋಟೋ ಕೂಡ ಪ್ರದರ್ಶನಗೊಂಡಿತ್ತು.

ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಉದ್ಘಾಟಿಸಿದರು

ಈ ಫೋಟೋಗೆ ಫಿದಾ ಆದ ಸಿಎಂ ಪ್ರದರ್ಶನದಲ್ಲಿ ಹಾಕಿದ್ದ ಸಿದ್ದರಾಮಯ್ಯರ ಫೋಟೋ ಫ್ರೇಮ್​ಗೆ ಕ್ಯಾಮರಾ ಹಿಡಿದು ಅವರ ಫೋಟೋವನ್ನು ಕ್ಲಿಕ್ಕಿಸಿ ಗಮನ ಸೆಳೆದರು. ಛಾಯಾಚಿತ್ರ ತೆಗೆಯುವುದರಲ್ಲಿಯೂ ಆಸಕ್ತಿ ಹೊಂದಿರುವ ಸಿಎಂ ಉತ್ಸಾಹದಿಂದ ಫೋಟೋ ಪ್ರದರ್ಶನ ಉದ್ಘಾಟಿಸಿ ಪತ್ರಿಕಾ ಛಾಯಾಗ್ರಾಹಕರಿಗೆ ಶುಭಾಶಯ ಕೋರಿದರು.

ಇದನ್ನೂ ಓದಿ:ಬದುಕಿನ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅಧ್ಯಾತ್ಮಿಕ ಕೇಂದ್ರ ಆರ್ಟ್ ಆಫ್ ಲಿವಿಂಗ್: ಸಿಎಂ

ABOUT THE AUTHOR

...view details