ಬೆಂಗಳೂರು :ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇಂದು ಆಯೋಜಿಸಿದ್ದ ದಿವಂಗತ ಡಿ. ದೇವರಾಜ ಅರಸು ಅವರ 106ನೇ ಜನ್ಮದಿನದ ಪ್ರಯುಕ್ತ ಅರಸು ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಯೊಂದಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ದೇವರಾಜ ಅರಸು ಹೆಜ್ಜೆ ಗುರುತುಗಳು ನಮಗೆ ಇಂದಿಗೂ ಆದರ್ಶ. ಹಿಂದುಳಿದ ವರ್ಗದ ಏಳಿಗೆಗೆ, ಆ ಜನರ ಸ್ವಾಭಿಮಾನದ ಬದುಕಿಗಾಗಿ ಬದ್ಧತೆಯಿಂದ ಕೆಲಸ ಮಾಡಬೇಕಾದ ದಿನ. ಅರಸು ಅವರ ಕ್ರಾಂತಿಕಾರಿ ಭೂಸುಧಾರಣೆ ನಮಗೆ ಆದರ್ಶ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವುದನ್ನು ಅರಸು ಅವರು ಅಕ್ಷರಶಃ ಪಾಲಿಸಿದವರು ಎಂದರು.
ದಿವಂಗತ ಡಿ. ದೇವರಾಜ ಅರಸು 106ನೇ ಜನ್ಮದಿನ ಸಮಯ ನೀಡಿದರೆ ದೆಹಲಿಗೆ ಹೋಗುತ್ತೇನೆ :ಎರಡ್ಮೂರು ಸಚಿವರ ಬಗ್ಗೆ ಮಾತನಾಡಲು ಸಮಯ ಕೇಳಿದ್ದೇನೆ. ಹೈಕಮಾಂಡ್ ಸಮಯ ನೀಡಿದರೇ ಮುಂದಿನ ವಾರ ದೆಹಲಿಗೆ ಹೋಗುತ್ತೇನೆ ಎಂದರು. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಪಿ ಸಿ ಮೋಹನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ಅರಸು ಬಳಸಿದ್ದ ಕಾರು :ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು ಬಳಸಿದ್ದ ಕಾರು ಎಲ್ಲರ ಗಮನ ಸೆಳೆಯಿತು. ಅರಸು ಅವರ 106ನೇ ಜನ್ಮದಿನದ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಅವರ ಪ್ರತಿಮೆ ಬಳಿ ಕಾರನ್ನು ನಿಲ್ಲಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರೆಲ್ಲರೂ ಕಾರನ್ನು ಕುತೂಹಲದಿಂದ ವೀಕ್ಷಿಸಿದರು.
ಗಮನ ಸೆಳೆದ ದೇವರಾಜ ಅರಸು ಬಳಸಿದ್ದ ಕಾರು ಇದನ್ನೂ ಓದಿ:ಹವಾ ನಿಯಂತ್ರಿತ ಬಸ್ ಸೇವೆ ಪುನರಾರಂಭಿಸಿದ ಬಿಎಂಟಿಸಿ