ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ 47ನೇ ಜಿಎಸ್ಟಿ ಸಭೆಯಲ್ಲಿ ಭಾಗವಹಿಸಲು ಚಂಡೀಗಢಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ರಾಜ್ಯಕ್ಕೆ ವಾಪಸ್ಸಾದರು.
ಜಿಎಸ್ಟಿ ಸಭೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಸಿಎಂ ಬೊಮ್ಮಾಯಿ - cm bommai back to Bangalore
ಸಿಎಂ ಬಸವರಾಜ ಬೊಮ್ಮಾಯಿ ಜಿಎಸ್ಟಿ ಸಭೆಯಲ್ಲಿ ಭಾಗವಹಿಸಿ ಸಂಜೆ ಆರ್ಟಿ ನಗರದಲ್ಲಿರುವ ಖಾಸಗಿ ನಿವಾಸಕ್ಕೆ ವಾಪಸ್ಸಾಗಿದ್ದಾರೆ.

ಜಿಎಸ್ಟಿ ಸಭೆ ಮುಗಿಸಿ ವಾಪಸ್ಸಾದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಂಡೀಗಢದಲ್ಲಿ ನಡೆದ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಆರಂಭಕ್ಕೂ ಮುನ್ನ ಹಲವು ರಾಜ್ಯಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದರು. ಮೇಘಾಲಯ ರಾಜ್ಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಗೋವಾ ಹಣಕಾಸು ಸಚಿವರು, ಬಿಹಾರ ರಾಜ್ಯದ ಉಪ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಸಭೆಯಲ್ಲಿ ಭಾಗವಹಿಸಿ ಇದೀಗ ರಾಜ್ಯಕ್ಕೆ ಮರಳಿದ್ದಾರೆ.
ಇದನ್ನೂ ಓದಿ:ಜುಲೈ 1 ರಿಂದ ಜೆಡಿಎಸ್ 'ಜನತಾ ಮಿತ್ರ': ಪೂರ್ವಭಾವಿ ಸಭೆ ನಡೆಸಿದ ಹೆಚ್ಡಿಕೆ