ಕರ್ನಾಟಕ

karnataka

ETV Bharat / state

ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ: ಸದ್ಯದ ಹಣಕಾಸು ಪರಿಸ್ಥಿತಿ ಹೇಗಿದೆ?

ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ ನಡೆಸಿದ್ದು, ಸದ್ಯದ ಹಣಕಾಸು ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ತಿಳಿಯೋಣಾ ಬನ್ನಿ...

CM Bommai budget preparation, CM Bommai budget preparation amidst financial hardship, CM Bommai budget news, ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ, ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ, ಸಿಎಂ ಬೊಮ್ಮಾಯಿ ಬಜೆಟ್​ ಸುದ್ದಿ,
ಆರ್ಥಿಕ ಸಂಕಷ್ಟದ ಮಧ್ಯೆ ಸಿಎಂ ಬೊಮ್ಮಾಯಿ ಬಜೆಟ್ ಸಿದ್ಧತೆ

By

Published : Feb 2, 2022, 8:06 AM IST

ಬೆಂಗಳೂರು:ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. 2023ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಘೋಷಣೆಯೊಂದಿಗೆ ಬಜೆಟ್ ಮಂಡಿಸುವ ಅನಿವಾರ್ಯತೆ ಸಿಎಂ ಬೊಮ್ಮಾಯಿ ಮೇಲಿದೆ. ಆದರೆ, ಆರ್ಥಿಕ ಸಂಕಷ್ಟದ ಮಧ್ಯೆ ಬಜೆಡ್ ಮಂಡಿಸುವ ಇಕ್ಕಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸಿಲುಕಿದ್ದಾರೆ. ಸದ್ಯದ ಆರ್ಥಿಕ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲು ಸಿಎಂ ನಿರ್ಧರಿಸಿದ್ದಾರೆ. 2023 ವಿಧಾನಸಭೆ ಚುನಾವಣೆ ಹಿನ್ನೆಲೆ ಸಿಎಂ ಬೊಮ್ಮಾಯಿಗೆ ಈ ಬಜೆಟ್ ನಿರ್ಣಾಯಕವಾಗಿದೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಸೆಳೆಯುವ ಬಜೆಟ್ ಮಂಡಿಸುವ ಅನಿವಾರ್ಯತೆ ಬಿಜೆಪಿ ಸರ್ಕಾರದ್ದಾಗಿದೆ. ಆದರೆ ಆರ್ಥಿಕ ಸಂಕಷ್ಟ ಸಿಎಂ ಬೊಮ್ಮಾಯಿ ಬಜೆಟ್ ಮಂಡನೆಗೆ ಅಡ್ಡಗಾಲಾಗಿ ಪರಿಣಮಿಸಿದೆ.

ಓದಿ:ಬೆಡ್​ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್​ ದಂಪತಿ ಜಗಳ..ಅವನೊಬ್ಬ _ ಎಂಬುದು ಫೈಸ್ಟ್​ನೈಟ್​ನಲ್ಲೇ ತಿಳಿದಿತ್ತು ಎಂದ ಪತ್ನಿ!

ಆದಾಯ ಸಂಗ್ರಹ ಸೊರಗಿರುವ ಕಾರಣ ಬಜೆಟ್​ಗೆ ಹಣ ಹೊಂದಿಸುವುದು ಕಷ್ಟಕರವಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಜನಪ್ರಿಯ ಜನರಿಗೆ ಹೊರೆಯಾಗದ ಬಜೆಟ್ ಮಂಡಿಸುವುದು ಸಿಎಂ ಬೊಮ್ಮಾಯಿಗೆ ಅನಿವಾರ್ಯವಾಗಿದೆ.

ಸದ್ಯದ ಆರ್ಥಿಕ ಸ್ಥಿತಿಗತಿ ಏನಿದೆ?:

ಸದ್ಯ ರಾಜ್ಯದ ಆರ್ಥಿಕ ಸ್ಥಿತಿ ಕಳೆದ ವರ್ಷಕ್ಕಿಂತ ಉತ್ತಮವಾಗಿದ್ದರೂ ಈ ಬಾರಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಅದರಲ್ಲೂ ಮೂರನೇ ಅಲೆಯ ಹಿನ್ನೆಲೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಹೇರಿದ್ದ ಕಾರಣ ಆದಾಯ ಸಂಗ್ರಹದಲ್ಲಿ ಮತ್ತೆ ಹಿನ್ನಡೆಯಾಗಿದೆ.

ಇತ್ತ ಬದ್ಧ ವೆಚ್ಚ ಗಣನೀಯ ಏರಿಕೆಯಾಗಿದೆ. ಸುಮಾರು ಶೇ 102ರಷ್ಟು ಬದ್ಧ ವೆಚ್ಚ ಏರಿಕೆಯಾಗಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸೊರಗಿದ ತೆರಿಗೆ ಮೂಲಗಳಿಂದ ನಿರೀಕ್ಷಿತ ಆದಾಯ ಬರದೇ ಇರುವುದು ಸಿಎಂ ಬೊಮ್ಮಾಯಿಗೆ ತಲೆನೋವಾಗಿ ಪರಿಣಮಿಸಿದೆ.

ಓದಿ:ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ..ಸುನಾಮಿ ಭೀತಿ ಇಲ್ಲ!

ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ ಡಿಸೆಂಬರ್​ವರೆಗೆ ಸರ್ಕಾರ ಶೇ 75 ಗುರಿ ಸಾಧಿಸಿದೆ. ಒಟ್ಟು 1,72,271 ಕೋಟಿ ರೂ. ರಾಜಸ್ವ ಸ್ವೀಕೃತಿ ಗುರಿ ಮುಂದೆ ಡಿಸೆಂಬರ್ ಅಂತ್ಯಕ್ಕೆ 1,29,490 ಕೋಟಿ ರೂ. ಸಂಗ್ರಹ ಮಾಡಿದೆ. ಇನ್ನೂ ಶೇ 25 ರಾಜಸ್ವ ಸಂಗ್ರಹ ಬಾಕಿ ಉಳಿದುಕೊಂಡಿದೆ.

2021-22 ಸಾಲಿನಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹದ ಗುರಿ 1,11,494 ಕೋಟಿ ರೂ. ಇದೆ. ಈ ಪೈಕಿ ಈವರೆಗೆ 85,501 ಕೋಟಿ ರೂ. ಸಂಗ್ರಹ ಮಾಡಲಾಹಿದೆ. ಅಂದರೆ ಶೇ 76.69 ಗುರಿ ಸಾಧಿಸಲು ಸಾಧ್ಯವಾಗಿದೆ. ಸದ್ಯ ವಿತ್ತೀಯ ಕೊರತೆ 15,273 ಕೋಟಿ ರೂ.‌ಇದೆ. ರಾಜಸ್ವ ಕೊರತೆ ಸುಮಾರು 7,466 ಕೋಟಿ ರೂ.‌ ಇದೆ.

ತೆರಿಗೆ ಸಂಗ್ರಹದ ಸ್ಥಿತಿಗತಿ ಹೇಗಿದೆ?:

  • ವಾಣಿಜ್ಯ ತೆರಿಗೆ ಸಂಗ್ರಹ- 50,276 ಕೋಟಿ ರೂ.
    ಒಟ್ಟು ಗುರಿ ಸಾಧನೆ- 78.85%
  • ಅಬಕಾರಿ ಸಂಗ್ರಹ- 19,434 ಕೋಟಿ ರೂ.
    ಒಟ್ಟು ಗುರಿ ಸಾಧನೆ- 80%
  • ಮೋಟಾರು ವಾಹನ ತೆರಿಗೆ- 4,644 ಕೋಟಿ ರೂ.
    ಒಟ್ಟು ಗುರಿ ಸಾಧನೆ- 62%
  • ಮುದ್ರಾಂಕ ಹಾಗೂ ನೋಂದಣಿ- 9,767 ಕೋಟಿ ರೂ.
    ಒಟ್ಟು ಗುರಿ ಸಾಧನೆ- 77%
  • ಇತರ ತೆರಿಗೆ ಸಂಗ್ರಹ- 1,380 ಕೋಟಿ ರೂ.
    ಒಟ್ಟು ಗುರಿ ಸಾಧನೆ- 46%

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details