ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರಿನಲ್ಲಿ ಒಟ್ಟಿಗೆ ಚಿಕ್ಕಪೇಟೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ರಂಗನಾಥ ಸ್ವಾಮಿ ದೇಗುಲವು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಸುಮಾರು 1,200 ವರ್ಷಗಳ ಇತಿಹಾಸ ಹೊಂದಿದೆ. ಕೆಲ ದಿನಗಳ ಹಿಂದೆಯಷ್ಟೇ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನವೀಕರಣಗೊಳಿಸಲಾಗಿದೆ. ಗರ್ಭಗುಡಿ ದ್ವಾರಕ್ಕೆ ಬೆಳ್ಳಿ ಬಾಗಿಲನ್ನು ಜೋಡಣೆ ಮಾಡಲಾಗಿದ್ದು, ಇದಕ್ಕೆ 1.25 ಕೋಟಿ ರೂ. ಹಾಗೂ ಗರುಡಗಂಬಕ್ಕೆ 45 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.