ಬೆಂಗಳೂರು: ಸಂಪುಟ ವಿಸ್ತರಣೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌನವಾದ ಸನ್ನಿವೇಶ ವಿಧಾನಸೌಧದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಜಿಎಸ್‌ಟಿ ಸಭೆ ಕುರಿತು ಮಾತನಾಡುತ್ತಾ, "ಚಂಡಿಗಢದಲ್ಲಿ ಜಿಎಸ್‌ಟಿ ಕೌನ್ಸಿಲ್ ಸಭೆ ಇದೆ. ಈ ಸಭೆಯಲ್ಲಿ ಭಾಗಿಯಾಗಿ ಜೂನ್ 30ರಂದು ವಾಪಸ್ ಆಗುತ್ತೇನೆ. ಜಿಎಸ್‌ಟಿ ಕೌನ್ಸಿಲ್ನಲ್ಲಿ ನಮ್ಮದು ಗ್ರೂಪ್ ಆಫ್ ಮಿನಿಸ್ಟರ್ ಸಮಿತಿ ಇದೆ. ನಾವು ನಮ್ಮ ವರದಿಯನ್ನು ಈಗಾಗಲೇ ಸಬ್ಮಿಟ್ ಮಾಡಿದ್ದೇವೆ" ಎಂದರು.
"ಅಜೆಂಡಾದಲ್ಲಿರುವ ವಿಷಯಗಳ ಬಗ್ಗೆ ಚರ್ಚೆಯಾಗುತ್ತದೆ. ಜಿಎಸ್‌ಟಿ ಕಾಂಪನ್ಸೇಷನ್ ಈ ವರ್ಷ ಮುಗಿಯುತ್ತದೆ. ಅದರ ಬಗ್ಗೆ ಜಿಎಸ್‌ಟಿ ಕೌನ್ಸಿಲ್ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಆಗಬೇಕಿದೆ" ಎಂದು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು. ಸಭೆ ಕರೆದು ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಕೆಲವು ಕಡೆ ಹಳೆಯದನ್ನೇ ಉಳಿಸಿಕೊಳ್ಳಲಾಗಿದೆ. ಎಲ್ಲಾ ಪ್ರತಿಗಳೊಂದಿಗೆ ದೇವೇಗೌಡರಿಗೆ ಇಂದು ಉತ್ತರ ಕಳುಹಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ ವರ್ಗಾವಣೆ : ಬೆಳಗಾವಿಗೆ ಸಂಜೀವ್ ಪಾಟೀಲ ನೇಮಕ