ಬೆಂಗಳೂರು: ಆನಂದ್ ಸಿಂಗ್ ಅವರ ಭಾವನೆಗಳು ಅರ್ಥವಾಗುತ್ತದೆ. ಅವರ ಗೌರವಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಅವರ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದ್ದೇನೆ. ಅದಕ್ಕೆ ಅವರು ಸಹ ಒಪ್ಪಿದ್ದಾರೆ. ಇತರೆ ಅಸಮಾಧಾನಿತರ ಜೊತೆಗೂ ಕೂಡ ಮಾತನಾಡಿದ್ದೇನೆ. ಸಚಿವ ಎಂ.ಟಿ.ಬಿ ನಾಗರಾಜ್ ಅವರನ್ನು ಕರೆದು ಮಾತನಾಡುತ್ತೇನೆ ಎಂದರು.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಎಸ್.ನಿಜಲಿಂಗಪ್ಪ ಪ್ರತಿಮೆಗೆ ಗೌರವ ನಮನ:
ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಪುಣ್ಯತಿಥಿ ಅಂಗವಾಗಿ ಇಂದು ಅವರ ಪ್ರತಿಮೆ ಬಳಿ ತೆರಳಿ ಭಾವಚಿತ್ರಕ್ಕೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಎಸ್.ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಕಾವೇರಿ, ಕೃಷ್ಣಾ ನೀರಾವರಿ ಯೋಜನೆಗಳ ಚಿಂತನೆ ಆರಂಭಿಸಿದ್ದು ನಿಜಲಿಂಗಪ್ಪನವರು. ಅವರು ಪ್ರತಿನಿಧಿಸಿದ್ದ ಶಿಗ್ಗಾಂವಿ ಕ್ಷೇತ್ರದಿಂದಲೇ ನಾನು ಸ್ಪರ್ಧಿಸುತ್ತಾ ಬಂದಿದ್ದೇನೆ. ನಿಜಲಿಂಗಪ್ಪನವರು ರಾಷ್ಟ್ರಮಟ್ಟದ ನಾಯಕರು ಎಂದರು.
ಎಸ್.ನಿಜಲಿಂಗಪ್ಪ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಸಿಎಂ ನೆಹರು ಪ್ರತಿಮೆ ಪುನರ್ ಅನಾವರಣ:
ಇದೇ ವೇಳೆ ವಿಧಾನಸೌಧದ ಮುಂಭಾಗದಲ್ಲಿರುವ ಪಂಡಿತ್ ಜವಾಹರಲಾಲ್ ನೆಹರು ಅವರ ಪ್ರತಿಮೆಯನ್ನು ಪುನರ್ ಅನಾವರಣ ಮಾಡಿದರು. ಮೆಟ್ರೋ ಕಾಮಗಾರಿ ಹಿನ್ನೆಲೆ ನೆಹರು ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ಭಾಗಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮತ್ತೆ ಮುಂಚಿನ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನೆಹರು ಪ್ರತಿಮೆ ಪುನರ್ ಅನಾವರಣ