ಬೆಂಗಳೂರು: ದಿನವಿಡೀ ಪಕ್ಷದ ಶಾಸಕರು ಸಂಸದರ ಅಹವಾಲು ಆಲಿಸಿ ಸರಣಿ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಜೆ ರಿಲ್ಯಾಕ್ಸ್ ಆಗಿದ್ದು ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡ ಸಿಎಂ ಬೊಮ್ಮಾಯಿ - sutturu sri
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಇಂದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಸುತ್ತೂರು ಶ್ರೀಗಳ ಆಶೀರ್ವಾದ ಪಡೆದುಕೊಂಡ ಸಿಎಂ ಬೊಮ್ಮಾಯಿ
ಧಾರ್ಮಿಕ ಕಾರ್ಯದ ನಿಮಿತ್ತ ಬೆಂಗಳೂರು ಪ್ರವಾಸದಲ್ಲಿರುವ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೌಹಾರ್ದಯುತವಾಗಿ ಭೇಟಿ ಮಾಡಿದರು. ಶ್ರೀಗಳಿಂದ ಗುರುರಕ್ಷೆ ಸ್ವೀಕರಿಸಿದರು. ಈ ವೇಳೆ ಕೆಲ ಸಮಯ ಅನೌಪಚಾರಿಕ ಮಾತುಕತೆ ನಡೆಸಿದರು.
ಇದನ್ನೂ ಓದಿ:ಮುಸ್ಲಿಂ ಯುವಕನಿಗೆ ಹಿಂದೂ ಮಹಿಳೆಯ ಹೃದಯ ಕಸಿ