ಕರ್ನಾಟಕ

karnataka

ETV Bharat / state

ಕಾಗಿನೆಲೆ ಕನಕ ಗುರು ಪೀಠದ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದ ಸಿಎಂ ಬೊಮ್ಮಾಯಿ - ಕಾಗಿನೆಲೆ ಕನಕಗುರು ಪೀಠ

ನಾಳೆ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆ. ರಾಯಣ್ಣನ ಭಾವಚಿತ್ರಕ್ಕೆ‌ ಪೂಜೆ ಸಲ್ಲಿಸಬೇಕೆಂದು ಮನವಿ ಮಾಡಿದ್ದೆವು. ನಂದಗಡದಿಂದಲೂ ಪಾದಯಾತ್ರೆ ಮೂಲಕ‌‌ ಆಗಮಿಸಿ ಈ ಬಗ್ಗೆ ಮನವಿ ಮಾಡಿದ್ದರು. ನಾಳಿನ ಕಾರ್ಯಕ್ರಮಕ್ಕೆ ಬರಲು ಸಿಎಂ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದ್ದಾರೆ. ನಾಳೆ ನಾನು ರಾಯಣ್ಣನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ..

CM Basavaraja Bommai meets Kaginele kanakaguru Swamiji
ಕಾಗಿನೆಲೆ ಕನಕಗುರು ಪೀಠದ ಸ್ವಾಮೀಜಿ ಭೇಟಿಯಾದ ಸಿಎಂ ಬೊಮ್ಮಾಯಿ

By

Published : Aug 14, 2021, 7:49 PM IST

ಬೆಂಗಳೂರು :ಸಿಎಂ‌ ಬೊಮ್ಮಾಯಿಯವರು ಸಚಿವ ಕೆ ಎಸ್ ಈಶ್ವರಪ್ಪ ಜೊತೆಗೂಡಿ ಮೈಸೂರು ರಸ್ತೆಯಲ್ಲಿರುವ ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿಗಳನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

ಕಾಗಿನೆಲೆ ಶ್ರೀಗಳಿಂದ ಆಶೀರ್ವಾದ ಪಡೆದ ಸಿಎಂ ಬಸವರಾಜ ಬೊಮ್ಮಾಯಿ..

ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕಾಗಿನೆಲೆ ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ಪೂಜ್ಯರ ಆಶೀರ್ವಾದ ಎಲ್ಲರ ಮೇಲಿದೆ. ನಾಡಿನ ಸಾಮಾಜಿಕ ಸಾಮರಸ್ಯ ಕೊಡುಗೆ ನೀಡಿದ್ದಾರೆ. ಅನ್ಯಾಯ ಆದಾಗ ಹೋರಾಟದ ಮೂಲಕ ಸರಿಪಡಿಸುವ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳ ಜೊತೆ ನನಗೂ ಸಾಕಷ್ಟು ಒಡನಾಟ ಇದೆ ಎಂದರು.

ಓದಿ: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ವಿನಾಕಾರಣ ಕ್ಯಾತೆ : ಸಚಿವ ಗೋವಿಂದ ಕಾರಜೋಳ

ಬಳಿಕ ಕಾಗಿನೆಲೆ ಕನಕಗುರು ಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ನಾಳೆ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆ. ರಾಯಣ್ಣನ ಭಾವಚಿತ್ರಕ್ಕೆ‌ ಪೂಜೆ ಸಲ್ಲಿಸಬೇಕೆಂದು ಮನವಿ ಮಾಡಿದ್ದೆವು.

ನಂದಗಡದಿಂದಲೂ ಪಾದಯಾತ್ರೆ ಮೂಲಕ‌‌ ಆಗಮಿಸಿ ಈ ಬಗ್ಗೆ ಮನವಿ ಮಾಡಿದ್ದರು. ನಾಳಿನ ಕಾರ್ಯಕ್ರಮಕ್ಕೆ ಬರಲು ಸಿಎಂ ಬಸವರಾಜ ಬೊಮ್ಮಾಯಿ ಆಹ್ವಾನ ನೀಡಿದ್ದಾರೆ. ನಾಳೆ ನಾನು ರಾಯಣ್ಣನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು.

ABOUT THE AUTHOR

...view details