ಬೆಂಗಳೂರು: ಮಾಜಿ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಕೆಲ ಸುಧಾರಣೆ ತರುವ ಬಗ್ಗೆ ಶಿಫಾರಸು ಮಾಡಿದ್ದಾರೆ. ಅವುಗಳನ್ನು ನವೆಂಬರ್ 1 ರಿಂದ ಜಾರಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಕಾಸಸೌಧದಲ್ಲಿ ಮೊದಲ ಬಾರಿಗೆ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು, ಈ ಕುರಿತು ಮಾತನಾಡಿದರು. ವಿಜಯಬಾಸ್ಕರ್ ಕೊಟ್ಟಿರುವ ಶಿಫಾರಸುಗಳ ಜಾರಿಗೆ ಸಲಹಾ ಸಮಿತಿ ರಚಿಸುತ್ತೇವೆ. ಈ ಸಂಬಂಧ ಆಡಳಿತಾತ್ಮಕವಾಗಿ ಬಹುತೇಕ ನವೆಂಬರ್ 1ರಿಂದ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತದೆ ಎಂದರು.
ಬಜೆಟ್ನಲ್ಲಿ ಪ್ರಸ್ತಾಪಿಸಿರುವ ಹೊಸ ಕಾರ್ಯಕ್ರಮಗಳ ಜಾರಿಗೆ ಸೂಚಿಸಲಾಗಿದೆ. ಕೇಂದ್ರದ ಸಹಯೋಗದ ಯೋಜನೆಗಳಿಗೆ ಒತ್ತು ಕೊಡಬೇಕು. ಮುಂದಿನ ತ್ರೈಮಾಸಿಕ ಸಭೆಯಲ್ಲಿ ಈಗ ಕೊಟ್ಟಿರುವ ಟಾರ್ಗೆಟ್ ತಲುಪಬೇಕು. ಪ್ರಮುಖ ಅಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಜಿಡ್ಡು ಹಿಡಿದ ವ್ಯವಸ್ಥೆಯನ್ನು ಸುಧಾರಿಸಲು ಸೂಚಿಸಲಾಗಿದೆ. ಇಲಾಖಾವಾರು ಹಣ ಬಿಡುಗಡೆ ಆಗಿರುವುದರಲ್ಲಿ ಯಾವುದಕ್ಕೆ ಎಷ್ಟು ಖರ್ಚಾಗ್ತಿದೆ ಅಂತ ಮಾಹಿತಿ ಕೇಳಲಾಗಿದೆ ಎಂದು ತಿಳಿಸಿದರು.
ಮೂರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ