ಬೆಂಗಳೂರು :ತುಮಕೂರಿಗೆ ತೆರಳುವ ಮುನ್ನ ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾದ ವಚನಾನಂದ ಶ್ರೀಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭೇಟಿ ಮಾಡಿ ಆಶೀರ್ವಾದ ಪಡೆದರು.
ಪಂಚಮಸಾಲಿ ಪೀಠಕ್ಕೆ ಸಿಎಂ ಭೇಟಿ.. ಶ್ರೀಗಳಿಂದ ಆಶೀರ್ವಾದ ಪಡೆದ ಬಿ ಎಸ್ ಬೊಮ್ಮಾಯಿ.. - ಪಂಚಮಸಾಲಿ ಪೀಠಕ್ಕೆ ಸಿಎಂ ಭೇಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಹರಿಹರ ಪೀಠಕ್ಕೆ ಭೇಟಿ ನೀಡಿ ಪಂಚಮಸಾಲಿ ಪೀಠದ ಜಗದ್ಗುರುಗಳಾದ ವಚನಾನಂದ ಸ್ವಾಮೀಜಿಗಳಿಂದ ಆರ್ಶಿವಾದ ಪಡೆದರು..
ಪಂಚಮಸಾಲಿ ಪೀಠ
ಹೆಬ್ಬಾಳದ ಹರಿಹರ ಪೀಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಶ್ರೀಗಳಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಸಚಿವರಾದ ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್, ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿಗಳ ಜೊತೆ ಸ್ವಾಮೀಜಿಯಿಂದ ಗೌರವರಕ್ಷೆ ಪಡೆದುಕೊಂಡರು.