ಬೆಂಗಳೂರು: ಮೈಸೂರು ರಸ್ತೆಯಲ್ಲಿರುವ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಝೀರೋ ಟ್ರಾಫಿಕ್ ರಹಿತವಾಗಿ ತೆರಳಿದರು. ಆದರೆ, ಸಿಎಂ ಹೋಗುವಾಗ ಸಿಗ್ನಲ್ ಫ್ರೀ ಮಾಡಲಾಯಿತು.
ಮೌಖಿಕವಾಗಿ ಝೀರೋ ಟ್ರಾಫಿಕ್ ಬೇಡ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಇಂದು ಮುಖ್ಯಮಂತ್ರಿ ಪ್ರಯಾಣದ ವೇಳೆ ಜಂಕ್ಷನ್ ಟು ಜಂಕ್ಷನ್ ವಾಹನಗಳ ಕ್ಲಿಯರೆನ್ಸ್ಗೆ ಸೂಚನೆ ನೀಡಲಾಯಿತು.
ಕೊಟ್ಟ ಮಾತಿನಂತೆ ಝೀರೋ ಟ್ರಾಫಿಕ್ ಇಲ್ಲದೇ ಸಂಚರಿಸಿದ ಸಿಎಂ ಬೊಮ್ಮಾಯಿ ಸಿಎಂ ಹೊಗುವ ಹಾಗೂ ಬರುವ ಮುನ್ನ ವಾಕಿ ಟಾಕಿ ಮೂಲಕ ಸಂಚಾರಿ ಪೊಲೀಸರಿಗೆ ಸಿಗ್ನಲ್ ಕ್ಲಿಯರೆನ್ಸ್ ಮಾಡುವಂತೆ ಸೂಚನೆ ನೀಡಲಾಯಿತು. ಗೃಹ ಕಚೇರಿ ಕೃಷ್ಣಾದಿಂದಲೂ ಜಂಕ್ಷನ್ ಟು ಜಂಕ್ಷನ್ ಕ್ಲಿಯರೆನ್ಸ್ ಮಾಡಲಾಯಿತು. ನೈಸ್ ರಸ್ತೆ ಜಂಕ್ಷನ್ ಬಳಿ ಮಾತ್ರ ಸಾರ್ವಜನಿಕರ ವಾಹನಗಳನ್ನು ತಡೆ ಹಿಡಿಯಲಾಯಿತು.
ಆ್ಯಂಬುಲೆನ್ಸ್ಗೆ ಮೊದಲ ಆದ್ಯತೆ
ಸಂಚಾರಿ ಪೋಲೀಸರು ತಮ್ಮ ವಾಕಿ -ಟಾಕಿ ಮೂಲಕ ಸಂದೇಶ ರವಾನಿಸುವ ವೇಳೆ ಇನ್ಮುಂದೆ ನಿಮೋ ವನ್ ಮೂವ್ಮೆಂಟ್ (ಸಿಎಂ ಮೂವ್ ಮೆಂಟ್)ವೇಳೆ ಕೇವಲ ಜಂಕ್ಷನ್ ಟು ಜಂಕ್ಷನ್ ಕ್ಲಿಯರ್ ಇರಲಿ. ಕಂಪ್ಲೀಟ್ ಝೀರೋ ಕ್ಲಿಯರ್ ಇರೋದು ಬೇಡ. ಮೊದಲ ಆ್ಯಂಬುಲೆನ್ಸ್ ಗೆ ಕೊಡಿ. ಆ್ಯಂಬುಲೆನ್ಸ್ ಸಂಚಾರಕ್ಕೆ ಕ್ಲಿಯರ್ ಆದಮೇಲೆ ಸಿಎಂ ಮೂವ್ಮೆಂಟ್ ಮಾಡಿ ಎಂದು ಸೂಚಿಸಲಾಗಿದೆ.