ಕರ್ನಾಟಕ

karnataka

ETV Bharat / state

ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚು ಒತ್ತು: ಸಿಎಂ ಬೊಮ್ಮಾಯಿ - Shri Rama Seva Board

ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಗತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ
CM Basavaraj Bommai

By

Published : Apr 3, 2022, 6:54 AM IST

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಮ ನವಮಿ ಸೆಲೆಬ್ರೇಶನ್ ಟ್ರಸ್ಟ್ ಏರ್ಪಡಿಸಿದ್ದ 84ನೇ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಚಾಲನೆ ನೀಡಿದರು.


ನಂತರ ಮಾತನಾಡಿದ ಸಿಎಂ, ರಾಮ ಸೇವಾ ಮಂಡಳಿ 8 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ ಪ್ರಖ್ಯಾತಿ ಹೊಂದಿದೆ. ಚಪ್ಪಾಳೆ ಕೂಡ ಒಂದು ಸಂಗೀತ. ಶಾಸ್ತ್ರೀಯವಾಗಿ ನೈಜವಾಗಿ ಇಲ್ಲದೇ ಹೋದ್ರೂ ಅದನ್ನು ಗುರುತಿಸಬೇಕಿದೆ. ಸಂಗೀತ ಕೇಳುವಾಗ ಮನಸ್ಸು ಆಹ್ಲಾದವಾಗುತ್ತದೆ. ರಾಮನವಮಿ ಜೊತೆ ಸಂಗೀತ ಸೇರಿಸಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಹಾಗೂ ಸಾಹಿತಿ ಡಾ.ಸುಧಾಮೂರ್ತಿ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ:ಇಮ್ರಾನ್​​ ರಾಜಕೀಯ ಭವಿಷ್ಯಕ್ಕೆ ಕುತ್ತು..ವೇಗದ ಬೌಲಿಂಗ್​​​​ನಿಂದಲೇ ವಿಕೆಟ್​ ಉರುಳಿಸಲು ಖಾನ್ ಹೊಸ ತಂತ್ರ

ABOUT THE AUTHOR

...view details