ಕರ್ನಾಟಕ

karnataka

ETV Bharat / state

ದೇವರ ಸೃಷ್ಟಿಯಲ್ಲಿ ಪ್ರತಿಯೊಂದು ಘಳಿಗೆ, ಸ್ಥಳ ಒಳ್ಳೆಯವೇ ಆಗಿರ್ತವೆ: ಸಿಎಂ ಬೊಮ್ಮಾಯಿ - cm bommai chamarajangar visit

ಚಾಮರಾಜನಗರಕ್ಕೆ ಬರಬೇಕಾದ್ದು ನನ್ನ ಕರ್ತವ್ಯ. ನಾನು ಬರದಿದ್ದರೇ ಕರ್ತವ್ಯ ಲೋಪವಾಗುತ್ತಿತ್ತು. ಕರ್ತವ್ಯ ಲೋಪವಾಗಲು ನಾನೆಂದೂ ಒಪ್ಪಲ್ಲ. ದೇವರ ಸೃಷ್ಟಿಯಲ್ಲಿ ಪ್ರತಿಯೊಂದು ಘಳಿಗೆ, ಸ್ಥಳ ಒಳ್ಳೆಯವೇ. ಅವನ ಸೃಷ್ಟಿಯಲ್ಲಿ ಕೆಟ್ಟದ್ದು ಎಂಬುವುದಿಲ್ಲ ಎಂದು ಚಾಮರಾಜನಗರ ಭೇಟಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

cm-basavaraj-bommai-statement-of-chamarajangar-visit
ಸಿಎಂ ಬೊಮ್ಮಾಯಿ

By

Published : Oct 7, 2021, 6:41 PM IST

ಚಾಮರಾಜನಗರ: ದೇವರ ಸೃಷ್ಟಿಯಲ್ಲಿ ಪ್ರತಿಯೊಂದು ಘಳಿಗೆ, ಸ್ಥಳ ಒಳ್ಳೆಯವೇ. ಅವನ ಸೃಷ್ಟಿಯಲ್ಲಿ ಕೆಟ್ಟದ್ದು ಎಂಬುವುದಿಲ್ಲ. ಕೆಟ್ಟದ್ದು ಎಂಬ ಸಂಕುಚಿತ ಮನೋಭಾವದಿಂದ ಹೊರಬಂದಾಗ ಮಾತ್ರ ಆರೋಗ್ಯ, ವೈಜ್ಞಾನಿಕ, ತರ್ಕಬದ್ಧವಾದ ಯುವ ಸಮಾಜ ಸ್ಥಾಪಿಸಲು ಸಾಧ್ಯ ಎಂದು ಚಾಮರಾಜನಗರ ಭೇಟಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿ, ಚಾಮರಾಜನಗರಕ್ಕೆ ಬರಬೇಕಾಗಿದ್ದು, ನನ್ನ ಕರ್ತವ್ಯ. ನಾನು ಬರದಿದ್ದರೇ ಕರ್ತವ್ಯ ಲೋಪವಾಗುತ್ತಿತ್ತು. ಕರ್ತವ್ಯ ಲೋಪವಾಗಲು ನಾನೆಂದೂ ಒಪ್ಪಲ್ಲ. ಮುಂದಿನ‌ ದಿನಗಳಲ್ಲಿ ಚಾಮರಾಜನಗರ ಡಿಸಿ ಕಚೇರಿಗೆ ಬಂದು ಸಭೆ ನಡೆಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಶೀಘ್ರ 8 ಜಿಲ್ಲೆಗಳಿಗೆ ಮೆಡಿಕಲ್‌ ಕಾಲೇಜು: ರಾಜ್ಯದ 8 ಜಿಲ್ಲೆಗಳಿಗೆ ಮೆಡಿಕಲ್ ಕಾಲೇಜು ಆರಂಭ ಮಾಡಬೇಕಿದ್ದು, ಇನ್ನು ಒಂದೂವರೆ ವರ್ಷದಲ್ಲಿ ಆ ಕಾರ್ಯ ಮಾಡುತ್ತೇವೆ. ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಬೇಕೆಂಬ ದೃಢ ನಿಶ್ಚಯ ಸರ್ಕಾರದದ್ದಾಗಿದೆ. ಡಿಸೆಂಬರ್ ಒಳಗೆ ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ರಾಷ್ಟ್ರಪತಿಗಳು ಉದ್ಘಾಟನೆ ಮಾಡಿರುವುದು ನಮ್ಮ ಪುಣ್ಯ, ಅದೃಷ್ಟ. ಆರೋಗ್ಯ ಸೇವೆಯ ಕೇಂದ್ರ ಬಿಂದು ಆಗಲಿರುವ ಈ ಆಸ್ಪತ್ರೆಯಿಂದ ಚಾಮರಾಜನಗರ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ, ನಮ್ಮ ಸರ್ಕಾರವು ಸಾಮಾಜಿಕ, ಪ್ರಾದೇಶಿಕ ಅಸಮತೋಲನ ತೊಡೆದು ಹಾಕುವ ನಿರ್ಧಾರಕ್ಕೆ ಬದ್ಧವಾಗಿದೆ. ಹಿಂದುಳಿದಿರುವ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು. ಇದಕ್ಕೂ ಮುನ್ಮ, ರಾಜ್ಯದ ಪರವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ABOUT THE AUTHOR

...view details