ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೊದಲೇ ನಾನು ಬೆಳೆ ಹಾನಿ ಸಮೀಕ್ಷೆಗೆ ಸೂಚನೆ ಕೊಟ್ಟಿದ್ದೆ. ಇನ್ನೊಂದಿಷ್ಟು ಕೆಲಸ ಬಾಕಿ ಇದೆ. ಅದನ್ನು ಈ ತಿಂಗಳಲ್ಲೇ ಪೂರ್ಣಗೊಳಿಸುತ್ತೇವೆ. ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನೆಯ ನಂತರ ಮಾಧ್ಯಮಗಳ ಮಳೆ ಸಂಬಂಧಪಟ್ಟ ಕೆಲ ಪ್ರೆಶ್ನೆಗಳಿಗೆ ಉತ್ತರಿಸುತ್ತಾ ಈ ಬಾರಿ ಅನಿರೀಕ್ಷಿತವಾದ ಮಳೆ ಸುರಿಯುತ್ತಿದೆ.
ಇನ್ನೂ ನಾಲ್ಕೈದು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪರಿಣಾಮವಾಗಿ ಬೆಂಗಳೂರು ನಗರ ಹಾಗೂ ಕೆಲ ಜಿಲ್ಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದರು.
ಮಳೆಯ ಕುರಿತು ಈಗಾಗಲೇ ಸಭೆ ನಡೆಸಿ ಸೂಚನೆ ನೀಡಿದ್ದೇನೆ, ಮಳೆ ನಿಂತ ತಕ್ಷಣ ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳಿಗೆ ಪಟ್ಟಿ ಮಾಡಿ ನೀಡಿದ್ದೇನೆ. ಮಳೆಯಿಂದ ಹಾನಿಯಾದ ರಸ್ತೆ ರಿಪೇರಿ ಆಗಬೇಕು. ಹೀಗಾಗಿ, 280 ಕೋಟಿ ರೂ. ಹಣವದ ಟೆಂಡರ್‌ಗೆ ಅನುಮತಿ ಕೊಟ್ಟಿದ್ದೇನೆ ಎಂದು ಹೇಳಿದರು.
ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ ಹೆಚ್ಚಳ :ತಗ್ಗು ಪ್ರದೇಶಗಳಲ್ಲಿ ರಿಲೀಫ್ ಆಪರೇಷನ್ಗೆ ಎನ್‌ಡಿಆರ್‌ಎಫ್ ತಂಡಕ್ಕೂ ಸಿಬ್ಬಂದಿಯನ್ನು ಹೆಚ್ಚಿಸುವಂತೆ ಹೇಳಿದ್ದೇನೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳೆ ಹಾನಿ ಸಮಿಕ್ಷೆ ನಡೆಸಿದ್ದೇವೆ. ಅದಕ್ಕೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆಸುತ್ತೇವೆ.
ಇವತ್ತು ಭತ್ತ ಖರೀದಿಯ ಬಗ್ಗೆ ಸಭೆ ನಡೆಸುತ್ತೇನೆ. ತರಕಾರಿಗಳ ಬೆಲೆ ಮತ್ತು ಮತ್ತು ಬೆಳೆ ನಾಶದ ಕುರಿತು ಕೃಷಿ ಇಲಾಖೆಯ ಜೊತೆ ಚರ್ಚೆ ಕೂಡ ನೆಡೆಯಲಿದೆ. ಇವತ್ತು ಎಂಎಸ್‌ಪಿ ಸಭೆ ಇದೆ. ಆಹಾರ ಧಾನ್ಯಗಳ ಖರೀದಿಯ ಬೆಲೆ ನಿಗದಿ ಮಾಡುತ್ತೇವೆ ಎಂದರು.