ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದ ಅಪಘಾತ: ಸಂಪೂರ್ಣ ಮಾಹಿತಿ ಪಡೆದು ಕ್ರಮ ಎಂದ ಸಿಎಂ - State Progress Review

ಇಡೀ ದಿನ ರಾಜ್ಯದ ಪ್ರಗತಿ ಪರಿಶೀಲನೆ ನಡೆದಿದೆ. ಅದರಲ್ಲಿ ರಾಜ್ಯದ ಪ್ರಗತಿ, ಜನರಿಗೆ ಅನುಕೂಲ ಮಾಡಿಕೊಡುವ ವಿಚಾರ ಚರ್ಚೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

By

Published : Oct 17, 2022, 9:43 PM IST

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಯಿಂದ ಅಪಘಾತವಾಗಿರುವುದು ದುರದೃಷ್ಟಕರ ವಿಚಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇವತ್ತು ಅಪಘಾತವಾಗಿ ಮಹಿಳೆಗೆ ತೀವ್ರ ಗಾಯ ಆಗಿದೆ ಅಂತ ಕೇಳ್ಪಟ್ಟೆ.‌ ಅದು ದುರದೃಷ್ಟಕರ ವಿಚಾರ. ಅಪಘಾತಕ್ಕೆ ಕಾರಣ ಏನು?. ಮಾಹಿತಿ ಪಡೆದು ಸಂಪೂರ್ಣ ತನಿಖೆ ಮಾಡಿಸ್ತೇವೆ. ಬಳಿಕ ನಿರ್ಧಾರ ಮಾಡುತ್ತೇವೆ. ಪರಿಹಾರ ಕೊಡುವ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ಇಂದು ಇಡೀ ದಿನ ರಾಜ್ಯದ ಪ್ರಗತಿ ಪರಿಶೀಲನೆ ನಡೆದಿದೆ. ಅದರಲ್ಲಿ ರಾಜ್ಯದ ಪ್ರಗತಿ, ಜನರಿಗೆ ಅನುಕೂಲ ಮಾಡಿಕೊಡುವ ವಿಚಾರ ಚರ್ಚೆಯಾಗಿದೆ. ಸರ್ಕಾರದ ಯೋಜನೆ ತ್ವರಿತ ಗತಿಯಲ್ಲಿ ಮುಗಿಯುವುದು. ಪ್ರತೀ ಅಧಿಕಾರಿಗಳ‌ ಹಂತದಲ್ಲಿ ಫೈಲ್ ಮೂವ್ ಆಗಬೇಕು. ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಮತ್ತು ಡಿಸಿಗಳು ತಾಲೂಕುಗಳಿಗೆ ಹೋಗುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಓದಿ:ಹಳೆ ಮಾಹಿತಿಯನ್ನೇ ಕಾಪಿ ಪೇಸ್ಟ್ ಮಾಡಿ ತಂದ ಸಿಇಒಗಳಿಗೆ ಚಳಿ ಬಿಡಿಸಿದ ಸಿಎಂ

ABOUT THE AUTHOR

...view details