ಕರ್ನಾಟಕ

karnataka

ETV Bharat / state

ದೆಹಲಿ ಯಾತ್ರೆ ಮುಗಿಸಿ ವಾಪಸಾದ ಸಿಎಂ; ಇದೀಗ ಸಂಪುಟ ರಚನೆಯ ಸುತ್ತ ಹಲವು ಲೆಕ್ಕಾಚಾರಗಳ ಹುತ್ತ!

ಇತ್ತ ಸಂಪುಟ ರಚನೆಯ ಹಲವು ಲೆಕ್ಕಾಚಾರಗಳು ಸದ್ಯ ಸುದ್ದಿ ಮಾಡುತ್ತಿವೆ. ಸಮುದಾಯವಾರು ಪ್ರಾತಿನಿದ್ಯಕ್ಕೆ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. 8+7+7+7+4 =33 ಸೂತ್ರದಡಿ ಸಚಿವ ಸ್ಥಾನಕ್ಕೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಲಿಂಗಾಯತರಿಗೆ-8, ಒಕ್ಕಲಿಗರಿಗೆ-7, ದಲಿತರಿಗೆ-7, ಹಿಂದುಳಿದವರ್ಗದ ಶಾಸಕರಿಗೆ -7 ಸ್ಥಾನ ಹಾಗೂ ಜೈನ, ದೇವಾಂಗ ಸೇರಿ ಉಳಿದವರಿಗೆ 4 ಸ್ಥಾನ ‌ನೀಡುವ ಲೆಕ್ಕಾಚಾರದ ಹರಿದಾಡುತ್ತಿದೆ.

cabinet formation
ಸಮೂದಾಯವಾರು ಸಂಪುಟ ರಚನೆನೆ

By

Published : Aug 1, 2021, 1:47 AM IST

ಬೆಂಗಳೂರು: ಸಿಎಂ ದೆಹಲಿ ಭೇಟಿ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಶೀಘ್ರ ಸಂಪುಟ ರಚನೆ‌ ಎಂದಿರುವ ಸಿಎಂ ಬೊಮ್ಮಾಯಿ, ವರಿಷ್ಠರ ಸಂಪುಟ ಸಂದೇಶಕ್ಕಾಗಿ ಕಾಯುತ್ತಿದ್ದಾರೆ. ಈ‌ ಮಧ್ಯೆ ಸಚಿವಾಕಾಂಕ್ಷಿಗಳ ಲಾಬಿ ಮುಂದುವರಿದಿದ್ದು, ಸಂಪುಟ ರಚನೆಯ ಹಲವು ಲೆಕ್ಕಾಚಾರಗಳು ಸುದ್ದಿ‌ ಮಾಡುತ್ತಿವೆ.

‌ನೂತನ‌ ಸಿಎಂ ಬೊಮ್ಮಾಯಿ ತಮ್ಮ ದೆಹಲಿ ಯಾತ್ರೆ ಮುಗಿಸಿ ವಾಪಸಾಗಿದ್ದಾರೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾದಿಂದ ಹಿಡಿದು ಹಿರಿಯ ಬಿಜೆಪಿ ಸಚಿವರನ್ನು ಭೇಟಿಯಾಗಿ ಮರಳಿದ್ದಾರೆ.‌ ಇತ್ತ ಸಚಿವಾಕಾಂಕ್ಷಿಗಳ ಕಸರತ್ತು ಜೋರಾಗಿದೆ. ದೆಹಲಿ ಮಟ್ಟದಲ್ಲಿ, ಸಿಎಂ ಮಟ್ಟದಲ್ಲಿ, ಮಾಜಿ ಸಿಎಂ ಬಿಎಸ್​ವೈ ಮಟ್ಟದಲ್ಲಿ ಸಚಿವಾಕಾಂಕ್ಷಿಗಳು ತಮ್ಮ ಲಾಬಿಯನ್ನು ಮುಂದುವರಿಸಿದ್ದಾರೆ. ಒಂದಿಷ್ಟು ಜನ ಸಿಎಂ ಬೊಮ್ಮಾಯಿ ಸುತ್ತ ಓಡಾಡುತ್ತಿದ್ದರೆ. ಇನ್ನೊಂದಿಷ್ಟು ಮಂದಿ ಮಾಜಿ ಸಿಎಂ ಯಡಿಯೂರಪ್ಪ ನಿವಾಸದತ್ತ ಗಿರಕಿ ಹೊಡೆಯುತ್ತಿದ್ದಾರೆ. ಮುನಿರತ್ನ, ನಿರಾಣಿ, ರೇಣುಕಾಚಾರ್ಯ, ರಮೇಶ್ ಜಾರಕಿಹೊಳಿ, ಎಂ.ಪಿ.ಕುಮಾರಸ್ವಾಮಿ ಮುಂತಾದವರು ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್​ವೈ ಬಳಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರೆ, ಮಿತ್ರ ಮಂಡಳಿಯ ಬಹುತೇಕರು ಸಿಎಂ ಬೊಮ್ಮಾಯಿ ಬಳಿ ಲಾಬಿ ನಡೆಸುತ್ತಿದ್ದಾರೆ. ಆದರೆ, ಸಂಪುಟ ರಚನೆಯ ಕ್ಲೈಮಾಕ್ಸ್ ಮಾತ್ರ ಹೈಕಮಾಂಡ್ ಅಂಗಳದಲ್ಲೇ ಎಂಬುದು ಬಹುತೇಕ ಸಚಿವಾಕಾಂಕ್ಷಿಗಳಿಗೆ ಸ್ಪಷ್ಟವಾಗಿದೆ.

ಚಾಲ್ತಿಯಲ್ಲಿ ಸಂಪುಟ ರಚನೆಯ ಹಲವು ಲೆಕ್ಕಾಚಾರ:

ಇತ್ತ ಸಂಪುಟ ರಚನೆಯ ಹಲವು ಲೆಕ್ಕಾಚಾರಗಳು ಸದ್ಯ ಸುದ್ದಿ ಮಾಡುತ್ತಿವೆ. ಸಮುದಾಯವಾರು ಪ್ರಾತಿನಿದ್ಯಕ್ಕೆ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

8+7+7+7+4 =33 ಸೂತ್ರದಡಿ ಸಚಿವ ಸ್ಥಾನಕ್ಕೆ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಲಿಂಗಾಯತರಿಗೆ-8, ಒಕ್ಕಲಿಗರಿಗೆ-7, ದಲಿತರಿಗೆ-7,
ಹಿಂದುಳಿದವರ್ಗದ ಶಾಸಕರಿಗೆ -7 ಸ್ಥಾನ ಹಾಗೂ ಜೈನ, ದೇವಾಂಗ ಸೇರಿ ಉಳಿದವರಿಗೆ 4 ಸ್ಥಾನ ‌ನೀಡುವ ಲೆಕ್ಕಾಚಾರದ ಹರಿದಾಡುತ್ತಿದೆ. ಈ ಪಂಚ ಸೂತ್ರದಡಿ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಎಲ್ಲರಿಗೆ ಪ್ರಾತಿನಿಧ್ಯ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಹೀಗಾಗಿ ಸಮುದಾಯವಾರು ಪಟ್ಟಿ ಸಿದ್ಧಪಡಿಸಲು ತೀರ್ಮಾನ ಮಾಡಲಾಗಿದೆ‌. ಬಿಎಸ್​ವೈ, ಇನ್ನಿತರ ನಾಯಕರ ಜೊತೆ ಚರ್ಚಿಸಿ ಪಟ್ಟಿ ರೆಡಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಕೋವಿಡ್​​ ಕಟ್ಟೆಚ್ಚರಕ್ಕೆ ಕ್ರಮ : ಸಿಎಂ ಬೊಮ್ಮಾಯಿ ಮಾಹಿತಿ

ಬುಧವಾರ ಅಥವಾ ಗುರುವಾರ ಬೊಮ್ಮಾಯಿಯವರ ಮಂತ್ರಿ ಮಂಡಲ ರಚನೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ವರಿಷ್ಟರಿಂದ ಕರೆ ಬರುವ ಸಾಧ್ಯತೆ ಇದ್ದು, ಬಳಿಕ ಅಗತ್ಯ ಬಿದ್ದರೆ ಮತ್ತೆ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಿಎಂ ದೆಹಲಿ ಹೋದ ಬಳಿಕ ಸಂಪುಟ ರಚನೆ ಫೈನಲ್ ಆಗಲಿದೆ. ಪ್ರಮುಖ ಖಾತೆಗಳನೆಲ್ಲಾ ಹೈಕಮಾಂಡ್ ತೀರ್ಮಾನದಂತೆ ಹಂಚಿಕೆಯಾಗಲಿದ್ದು, ಕೆಲವೊಂದು ಖಾತೆ‌ ಹಂಚಿಕೆ ಜವಬ್ದಾರಿ ಸಿಎಂ ಬೊಮ್ಮಾಯಿ ಹೆಗಲಿಗೆ ಬೀಳಲಿದೆ. ಮೊದಲ ಹಂತದಲ್ಲಿ 28 ಮಂದಿಗೆ ಮಂತ್ರಿಗಿರಿ‌ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೆಲ‌ ಹಿರಿಯರನ್ನು ಕೈ ಬಿಟ್ಟು ಅದೇ ಜಾಗಕ್ಕೆ ಕೆಲವೊಂದು ಹಿರಿಯ ಅನುಭವಿ ಹೊಸ ಶಾಸಕರಿಗೆ ಮಣೆ ಹಾಕುವುದರ ಜೊತೆಗೆ ಮತ್ತೊಂದಿಷ್ಟು ಯುವ ಶಾಸಕರಿಗೂ ಮಣೆ ಹಾಕೋ‌ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

ಸಮುದಯವಾರು ಹರಿದಾಡುತ್ತಿರುವ ಹೆಸರು:

ಲಿಂಗಾಯತ ಸಮುದಾಯ:
ಅರವಿಂದ ಬೆಲ್ಲದ್
ಬಸನಗೌಡ ಪಾಟೀಲ್ ಯತ್ನಾಳ್
ತಿಪ್ಪಾರೆಡ್ಡಿ
ಮುರುಗೇಶ್ ನಿರಾಣಿ
ಉಮೇಶ್ ಕತ್ತಿ
ಲಕ್ಷ್ಮಣ ಸವದಿ/ಆನಂದ ಮಾಮನಿ
ಜೆ.ಸಿ.ಮಾಧುಸ್ವಾಮಿ/ವೀರಣ್ಣ ಚರಂತಿಮಠ
ಎಸ್.ವಿ.ರವೀಂದ್ರ ನಾಥ್/ಬಿಸಿ ನಾಗೇಶ್

ಒಕ್ಕಲಿಗ ಸಮುದಾಯ:
ಸಿ.ಪಿ.ಯೋಗೇಶ್ವರ್
ಆರ್.ಅಶೋಕ್
ಅಶ್ವಥ್ ನಾರಾಯಣ್
ನಾರಾಯಣಗೌಡ
ಎಸ್.ಟಿ.ಸೋಮಶೇಖರ್
ಡಾ.ಕೆ.ಸುಧಾಕರ್
ಕೆ.ಗೋಪಾಲಯ್ಯ/ಎಸ್.ಆರ್.ವಿಶ್ವನಾಥ್

ಎಸ್​ಸಿ-ಎಸ್​ಟಿ ಸಮುದಾಯ:
ಶ್ರೀರಾಮುಲು
ರಮೇಶ್ ಜಾರಕಿಹೊಳಿ/ಬಾಲಚಂದ್ರ ಜಾರಕಿಹೊಳಿ
ಗೋವಿಂದ ಕಾರಜೋಳ/ಎಂ.ಪಿ.ಕುಮಾರಸ್ವಾಮಿ
ಅರವಿಂದ ಲಿಂಬಾವಳಿ
ಎಸ್.ಅಂಗಾರ
ರಾಜುಗೌಡ/ಶಿವನಗೌಡ ನಾಯಕ್
ಪಿ.ರಾಜೀವ್/ದುರ್ಯೋಧನ ಐಹೊಳೆ

ಹಿಂದುಳಿದ ವರ್ಗ:
ಎಂಟಿಬಿ ನಾಗರಾಜ್
ಭೈರತಿ‌ ಬಸವರಾಜು
ಮುನಿರತ್ನಂ
ಆರ್.ಶಂಕರ್/ಕೆ.ಎಸ್.ಈಶ್ವರಪ್ಪ
ಸುನೀಲ್ ಕುಮಾರ್/ಕುಮಾರ ಬಂಗಾರಪ್ಪ
ಪೂರ್ಣಿಮಾ ಶ್ರೀನಿವಾಸ್

ಇತರೆ ಸಮುದಾಯ:
ಎಸ್.ಸುರೇಶ್ ಕುಮಾರ್
ಡಾ.ರಾಮದಾಸ್
ಆನಂದ್ ಸಿಂಗ್
ಶಿವರಾಂ ಹೆಬ್ಬಾರ್

ABOUT THE AUTHOR

...view details