ಬೆಂಗಳೂರು:ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯ ಭೇಟಿ ಸೇರಿ ಎಲ್ಲ ರಾಜಕೀಯ ವಿದ್ಯಮಾನಗಳಿಗೂ ಅಕ್ಟೋಬರ್ 6 ರಂದು ಉತ್ತರ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಲ್ಲರಿಗೂ ಚಾಮುಂಡೇಶ್ವರಿ ಆಶೀರ್ವದಿಸಲಿ..ಎಲ್ಲ ವಿಚಾರಕ್ಕೂ ಅ.6ರಂದು ಉತ್ತರಿಸುತ್ತೇನೆ: ಸಿಎಂ ಬೊಮ್ಮಾಯಿ - CM Basavaraj bommai
ಸೋನಿಯಾ ಗಾಂಧಿ ರಾಜ್ಯ ಪ್ರವಾಸ ಸೇರಿದಂತೆ ಎಲ್ಲ ವಿಚಾರಕ್ಕೂ ಅ.6ನೇ ತಾರೀಖಿನಂದು ಉತ್ತರ ನೀಡುತ್ತೇನೆ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಆರ್ಟಿ ನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಲಿ. ದುಷ್ಟರ ಶಿಕ್ಷೆಯಾಗಿ, ಶಿಷ್ಠರ ರಕ್ಷಣೆಯಾಗಲಿ. ನಾಡಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಇಂದು, ನಾಳೆ ದಸರಾ ಹಬ್ಬ ಇದೆ. ನಾಡಿನ ಜನರು ನೆಮ್ಮದಿಯಿಂದ ಹಬ್ಬ ಆಚರಣೆ ಮಾಡಲಿ ಎಂದು ಆಶಿಸಿದರು.
ಇದನ್ನೂ ಓದಿ:ಸೋಮವಾರವೇ ವಿಧಾನಸೌಧದಲ್ಲಿ ಆಯುಧ ಪೂಜೆ: ಕಚೇರಿಗಳಿಗೆ ರಂಗೋಲಿ, ಹೂ ಅಲಂಕಾರದ ಕಳೆ