ಬೆಂಗಳೂರು: ಸಚಿವ ಆನಂದ್ ಸಿಂಗ್ ಅಧಿಕಾರ ಸ್ವೀಕರಿಸದ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ ನನಗೆ ಗೊತ್ತಿಲ್ಲ, ನೀವುಂಟು ಅವರುಂಟು ಎಂದು ಸೂಚ್ಯವಾಗಿ ಹೇಳಿದರು. ವಿಧಾನಸೌಧದಲ್ಲಿ ಆನಂದ್ ಸಿಂಗ್ ಸಚಿವರಾಗಿ ಇನ್ನೂ ಅಧಿಕಾರ ಸ್ವೀಕರಿಸದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದರು.
ಅಧಿಕಾರ ಸ್ವೀಕರಿಸದ ಸಚಿವ ಆನಂದ್ ಸಿಂಗ್: 'ನೀವುಂಟು, ಅವರುಂಟು' ಎಂದ ಸಿಎಂ - ಸಚಿವ ಆನಂದ್ ಸಿಂಗ್ ಕೇಸ್
ಸಚಿವರಾಗಿ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕರಿಸದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ಗೊತ್ತಿಲ್ಲ, ನೀವುಂಟು ಅವರುಂಟು ಎಂದು ಹೇಳುತ್ತಾ ತೆರಳಿದರು.

ಸಿಎಂ ಬಸವರಾಜ ಬೊಮ್ಮಾಯಿ
ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಸಚಿವ ಆನಂದ್ ಸಿಂಗ್ ಬಂಡಾಯದ ಹಾದಿ ಹಿಡಿದಿದ್ದರು. ಸಿಎಂ ಜೊತೆಗಿನ ಸಂಧಾನದ ಬಳಿಕ ಬಂಡಾಯ ಶಮನವಾಗಿದೆ ಎನ್ನಲಾಗಿದೆ. ಆದರೆ, ಇದುವರೆಗೂ ಸಿಂಗ್ ತಮಗೆ ಹಂಚಿಕೆಯಾದ ವಿಧಾನಸೌಧ ಕೊಠಡಿಗೆ ಪ್ರವೇಶ ಮಾಡಿಲ್ಲ.
ಈ ಮೂಲಕ ಆನಂದ್ ಸಿಂಗ್ ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಹೇಳಿಕೆ ಕುತೂಹಲ ಮೂಡಿಸಿದೆ.