ಬೆಂಗಳೂರು:ತಮಿಳುನಾಡಿನ ಕೂನೂರ್ ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಕುಟುಂಬ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ದುರಂತ ನಮಗೆಲ್ಲ ದಿಗ್ಬ್ರಮೆ ಮೂಡಿಸಿದೆ ಎಂದರು.
ಮೈಸೂರು ರಸ್ತೆಯ ಆರ್ ವಿ ವಿಶ್ವವಿದ್ಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ಇಗಿನ ಮಾಹಿತಿ ಪ್ರಕಾರ, ಬಿಪಿನ್ ರಾವತ್ ಅವರನ್ನು ಆಸ್ಪತ್ರೆ ಗೆ ತೆಗೆದುಕೊಂಡ ಹೋಗಿರುವ ಬಗ್ಗೆ ಮಾಹಿತಿ ಇದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಥಳಕ್ಕೆ ಧಾವಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.