ಕರ್ನಾಟಕ

karnataka

ETV Bharat / state

ಕನ್ನಡದ ಯುವಕರಿಗೆ ಉದ್ಯೋಗ ಭದ್ರತೆ ಕೊಟ್ಟಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ: ಸಿಎಂ

ಕರ್ನಾಟಕ ಏಕೀಕರಣಕ್ಕೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಕುವೆಂಪು ಅವರ ಕೊಡುಗೆ ಇದೆ. ಅವರು ಕನ್ನಡ ನಾಡನ್ನು ಸ್ವಾಭಿಮಾನ, ಅಭಿಮಾನ ಅನ್ನೋ ಗುಣಧರ್ಮದಿಂದ ತುಂಬದಿದ್ರೆ ಕಷ್ಟ ಅಂತ ಅರಿತರು. ಹೀಗಾಗಿ ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೋರಾಟ ಶುರು ಮಾಡಿದರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಸಿಎಂ ಬಸವರಾಜ ಬೊಮ್ಮಾಯಿ  ಚಾಲನೆ ನೀಡಿದ
ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ

By

Published : Nov 1, 2021, 9:05 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮೈಸೂರು ಬ್ಯಾಂಕ್ ಬಳಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಉತ್ಸವ ಹಾಗೂ ಮೆರವಣಿಗೆಗೆ ಚಾಲನೆ ನೀಡಿದರು.

ಇದಾದ ಬಳಿಕ ಮಾತನಾಡಿದ ಅವರು, ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನ ಇವೆರಡರ ಸಂಗಮ ಎಲ್ಲಾದ್ರೂ ಆಗಿದ್ರೆ ವಾಟಾಳ್ ನಾಗರಾಜ್ ಅವರಿಂದ ಆಗಿದೆ. ಕರ್ನಾಟಕ ಏಕೀಕರಣ ಹತ್ತಿರದಿಂದ ನೋಡಿದ್ದಾರೆ ಎಂದರು.

ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಏಕೀಕರಣಕ್ಕೆ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಕುವೆಂಪು ಅವರ ಕೊಡುಗೆ ಇದೆ. ಅವರು ಕನ್ನಡ ನಾಡನ್ನು ಸ್ವಾಭಿಮಾನ, ಅಭಿಮಾನ ಅನ್ನೋ ಗುಣಧರ್ಮದಿಂದ ತುಂಬದಿದ್ರೆ ಕಷ್ಟ ಅಂತ ಅರಿತರು. ಹೀಗಾಗಿ ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೋರಾಟ ಶುರು ಮಾಡಿದರು ಎಂದರು.

ಬೆಂಗಳೂರಿನಲ್ಲಿ ಹೋರಾಟ ಆರಂಭಿಸಿ ಚಾಲನೆ ಕೊಟ್ಟವರು ವಾಟಾಳ್. 1962ರಲ್ಲಿ ಆರಂಭವಾಗಿ, ಅಂದಿನಿಂದ ಇಂದಿನವರೆಗೂ ಮಾಡಿಕೊಂಡು ಬಂದಿದ್ದಾರೆ. ಕರ್ನಾಟಕ ಅನ್ನೋ ಹೆಸರು 1972ರ ನಂತರ ಬಂದಿದ್ದು. ಅದಕ್ಕೂ ಮೊದಲೇ ಕರ್ನಾಟಕ ರಾಜ್ಯೋತ್ಸವ ಅಂತ ಮಾಡುತ್ತಾ ಬಂದಿದ್ದಾರೆ. ಕನ್ನಡದ ಧ್ವನಿ, ಸ್ವಾಭಿಮಾನ, ಹೋರಾಟ, ಬದುಕು ಅದರ ಪ್ರತೀಕ ವಾಟಾಳ್ ನಾಗರಾಜ್ ಎಂದು ಕೊಂಡಾಡಿದರು.

ಇಂದು ಕನ್ನಡವನ್ನ ಉಳಿಸಿ, ಕರ್ನಾಟಕವನ್ನು ಬೆಳೆಸಬೇಕಿದೆ. ಕನ್ನಡವನ್ನು ಬಳಕೆ ಮಾಡುವುದು, ಇತರರಿಗೆ ಕಲಿಸುವುದು, ಬದುಕಿನಲ್ಲಿ, ಸಾಹಿತ್ಯದಲ್ಲಿ ನಿರಂತರವಾಗಿ ಬಳಸಬೇಕಿದೆ. ಕನ್ನಡದ ಯುವಕರಿಗೆ ಉದ್ಯೋಗ ಭದ್ರತೆ ಕೊಟ್ಟಾಗ ಮಾತ್ರ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಶಿಕ್ಷಣದಲ್ಲಿ ಕನ್ನಡಕ್ಕೆ ಸ್ಥಾನ ಇರಲಿಲ್ಲ. ಅದನ್ನು ಅಳವಡಿಸೋ ಕೆಲಸ ನಮ್ಮ ಸರ್ಕಾರ ಮಾಡಿದೆ. ಅದಕ್ಕೆ ಮಾದರಿಯಾಗಿ ಡಿಟಿಇ ಶಿಕ್ಷಣವೂ ಕನ್ನಡದಲ್ಲಿ ಅಳವಡಿಸಲಾಗಿದೆ.

ಯುವಜನತೆಗೆ ಕೌಶಲ್ಯಭರಿತವಾದ ತರಬೇತಿ, ಜೊತೆಗೆ ಉದ್ಯೋಗ ನೀಡಲಾಗುವುದು. ಉದ್ಯೋಗ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ. ಇಂದು ಎಲ್ಲ ವಿಚಾರಗಳಿಗೆ ತರಬೇತಿ ನೀಡಲಾಗ್ತಿದೆ. ಕರ್ನಾಟಕ ಅನೇಕ ಕ್ಷೇತ್ರದಲ್ಲಿ ಮುಂದುವರೆದಿದ್ದು, ಇನ್ನೂ ಅಗತ್ಯವಿದೆ. ನಮ್ಮ ನೆಲ,‌ ಜಲ ಉಳಿಸಬೇಕಿದ್ದು, ಜನರಿಗೆ ದೊರಕಿಸಿಕೊಡಬೇಕಿದೆ. ಕೇಂದ್ರಕ್ಕೆ ಹೋದಾಗ ಸಂಬಂಧಪಟ್ಟ ಸಚಿವರ ಜೊತೆಯೂ ಚರ್ಚೆ ಮಾಡ್ತೀನಿ ಎಂದರು.

ABOUT THE AUTHOR

...view details