ಬೆಂಗಳೂರು: ಇಡೀ ಭಾರತದಲ್ಲೇ ಜಾನಪದ ವಿಶ್ವವಿದ್ಯಾಲಯವು ಹಾವೇರಿಯ ಶಿಗ್ಗಾವಿಯಲ್ಲಿರುವುದು ನಮ್ಮ ಹೆಮ್ಮೆ. ಅದರ ವ್ಯಾಪ್ತಿಯನ್ನು ಹೆಚ್ವಿಸುವ ಕೆಲಸ ಈ ವರ್ಷ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಕ್ಕೂರು ಬಡಾವಣೆಯಲ್ಲಿ ಮಾದರಿ ಪಾರಂಪರಿಕ ಕಲಾ ಗ್ರಾಮ, ರಂಗೋಲಿ ಗಾರ್ಡನ್ಸ್ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಂಸ್ಕೃತಿ, ಸಂಸ್ಕಾರ ಇಲ್ಲದೆ ಬದುಕಲಾರ. ಸಮಾಜದಲ್ಲಿ ಸಾಮೂಹಿಕವಾಗಿ ಬದುಕುತ್ತಾನೆ. ಅದಕ್ಕೆ ಭಾಷೆ, ಅರ್ಥ, ಭಾವನೆ, ನೀತಿ, ಗಾಯನ ಇರಬೇಕು. ಇದೆಲ್ಲವೂ ಒಂದಕ್ಕೊಂದು ಹೊಂದಿಕೊಂಡು ಬಿಂಬಿತವಾಗಿದೆ. ನಮ್ಮ ಸಂಸ್ಕೃತಿಯನ್ನು ಜನ ಪ್ರೀತಿಸುತ್ತಾರೆ ಎಂದರು.
ಶಾಸಕ ಕೃಷ್ಣಬೈರೇಗೌಡರು ಉತ್ತರ ಕರ್ನಾಟಕದ ಸಂಸ್ಕೃತಿಯ ಕಲೆಯನ್ನು ಬಿಂಬಿಸಲು ನೆರವಾಗಿದ್ದು ಶ್ಲಾಘನೀಯ. ಬೆಂಗಳೂರಿಗೆ ಗ್ರಾಮೀಣ ಕಲೆಯ ವಿಹಾರ ದೊರೆಯುತ್ತದೆ. ಶಿಶುನಾಳ ಶರೀಫರ ಕರ್ಮ ಭೂಮಿಯಲ್ಲಿ ಇದೇ ಮಾದರಿಯ ಯೋಜನೆಗೆ ಚಾಲನೆ ನೀಡಲಾಗಿದೆ. ಇಂತಹ ಕಲೆ, ಪರಂಪರೆ, ಇತಿಹಾಸವನ್ನು ಮಕ್ಕಳಿಗೆ ಬಿಂಬಿಸುವ ಉತ್ತಮ ಕೆಲಸವಾಗಿದೆ.
ರಂಗೋಲಿ ಗಾರ್ಡನ್ ರೂವಾರಿ ರಾಜು ಕುನ್ನೂರ್ ಕಲಾ ಜಗತ್ತಿಗೆ ಬಂದಿರುವದು ಸಂತೋಷದ ಸಂಗತಿ. ಇದನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು. ಕರ್ನಾಟಕದ ವಿವಿಧ ಸಂಸ್ಕೃತಿಯನ್ನು ಬಿಂಬಿಸುವಂತಾಗಬೇಕು. ಜಾನಪದ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯಲ್ಲಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ