ಬೆಂಗಳೂರು:ರಾಜ್ಯದ ಎಲ್ಲ ಹಳ್ಳಿಗಳ ಮನೆ ಬಾಗಿಲಿಗೆ ಜನವರಿ 26 ರಿಂದ ಜನಸೇವಕ ಬರಲಿದ್ದಾನೆ ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿಂದು ವಿಧಾನಸೌಧದಲ್ಲಿ ಜನಸೇವಕ, ಜನಸ್ಪಂದನ ಹಾಗೂ ಸಾರಿಗೆ ಇಲಾಖೆಯ ಆನ್ಲೈನ್ ಸೇವೆಗೆ ಮೂಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಿಎಂ, ಜನರ ಮನೆ ಮನೆ ಬಾಗಿಲಿಗೆ ಸೇವೆ ತಲುಪಿಸುವ ಜನಸೇವಕ ಯೋಜನೆಯನ್ನು ರಾಜ್ಯಾದ್ಯಂತ ಜನವರಿ 26ರಿಂದ ಜಾರಿಗೆ ತರಲಿದ್ದೇವೆ. ಬೆಂಗಳೂರಲ್ಲಿ ಪ್ರಾಯೋಗಿಕವಾಗಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜನಸೇವಕ ಯೋಜನೆ ಜಾರಿಯಲ್ಲಿತ್ತು. ಅದನ್ನು ಜ.26ರಂದು ರಾಜ್ಯಾದ್ಯಂತ ವಿಸ್ತರಿಸಲಿದ್ದೇವೆ ಎಂದರು.
ಬೆಂಗಳೂರಿನಾದ್ಯಂತ ಜನಸೇವಕ ಜಾರಿ:
ಬೆಂಗಳೂರಿನ ಐದು ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಜನಸೇವಕ ಯೋಜನೆಯನ್ನು ಇದೀಗ ಬೆಂಗಳೂರಿನ 28 ಕ್ಷೇತ್ರಗಳಿಗೂ ವಿಸ್ತರಿಸಲಾಗಿದೆ. ಜನಸೇವಕ ಮೂಲಕ ಎಂಟು ಇಲಾಖೆಗಳ ವ್ಯಾಪ್ತಿಯಲ್ಲಿ 58 ಸೇವೆಗಳನ್ನು ಒದಗಿಸಲಾಗುವುದು. ಬೆಂಗಳೂರು ಹೆಚ್ಚು ವಿಧಾನಸಭಾ ಕ್ಷೇತ್ರ ಹೊಂದಿದೆ. ಇಲ್ಲಿ ಅತಿ ಹೆಚ್ಚು ಜನರಿದ್ದು, ಇಲ್ಲಿಂದಲೇ ಸೇವೆ ಆರಂಭಿಸಲಾಗುವುದು. ತೊಂದರೆ ಆದರೆ ಇಲ್ಲಿಂದಲೇ ಸರಿಪಡಿಸೋಣ ಎಂದು ಸಿಎಂ ಹೇಳಿದರು.
ಈ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ. ಈ ಯಶಸ್ಸು ಸರ್ಕಾರಕ್ಕೆ ಭದ್ರ ಬುನಾದಿಯಾಗಲಿದೆ. ಮುಂಬರುವ ಸಮಸ್ಯೆ ದಿಟ್ಟವಾಗಿ ಎದುರಿಸುವ ಕೆಲಸ ಮಾಡಲಿದ್ದೇವೆ. ರಾಜ್ಯೋತ್ಸವ ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ನಮ್ಮೆಲ್ಲರ ಮನೆ ಬಾಗಿಲು ಮುಟ್ಟಿದಾಗ ಅದು ಆಗಲಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಪರಿಪೂರ್ಣ ಆಗಲು ನಾಗರಿಕರಿಗೆ ಸಹಾಯ ಬೇಕು. ಈ ಯೋಜನೆಯ ಯಶಸ್ವಿಗೊಳಿಸುವುದು ಅಧಿಕಾರಿಗಳ ಹೊಣೆಯಾಗಿದೆ ಎಂದರು.
ಕರ್ನಾಟಕದ ಆಡಳಿತದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಬದಲಾವಣೆಯ ಪರ್ವ ಪ್ರಾರಂಭವಾದ ದಿನ. ಆಡಳಿತ ಬೇರೆ, ಆಡಳಿತ ಮಾಡುವುದು ಬೇರೆ. ಜನ ಪ್ರತಿನಿಧಿಗಳು ಇರೋ ಸರ್ಕಾರ ಆಡಳಿತ ಮಾಡುವ ಕೆಲಸ ಮಾಡಬೇಕು. ಜನ ಹಿತ, ಜನಪರ ಕೆಲಸ ಮಾಡುವುದು ಆಡಳಿತ. ಕಾರ್ಯಕ್ರಮ ಅನುಷ್ಠಾನ ಮಾಡುವುದು ಆಡಳಿತ ಯಂತ್ರದ ಕೆಲಸ. ಆದರೆ ಇತ್ತೀಚಿನ ದಿನಗಳಲ್ಲಿ ಆಳುವವರು ಆಡಳಿತ ಮಾಡಲು ಹೋಗುತ್ತಿದ್ದಾರೆ. ಆಡಳಿತ ಮಾಡುವವರು ಆಳುವವರಾಗುತ್ತಿದ್ದು, ಜನಸ್ನೇಹಿ ಕೆಲಸ ಮಾಡಬೇಕು. ಕೆಳ ಹಂತದಲ್ಲಿ ನಾಗರಿಕರಿಗೆ ಮತ್ತು ಜನರಿಗೆ ಸೇವೆ ತಲುಪಿಸುವ ಕೆಲಸ ಆಗುತ್ತಿಲ್ಲ. ನಾಗರಿಕರು ಯಾವುದಾದರೂಕಚೇರಿಗೆ ಹೋದರೆ ಸುಲಭವಾಗಿ ಕೆಲಸ ಆಗಬೇಕು ಎನ್ನುವ ಸರ್ಕಾರ ನೆರವಾಗಲು ಮುಂದಾಗಿದೆ. ಕೆಳ ಹಂತದ ನಾಗರಿಕ ಸೇವೆಯೇ ಮರೀಚಿಕೆಯಾಗಿದೆ. ನಮ್ಮ ಸರ್ಕಾರದಿಂದ ಜನರ ಬಾಗಿಲಿಗೆ ಹೋಗುವ ಕೆಲಸ ಮಾಡುತ್ತಿದ್ದೇವೆ ಎಂಧು ತಿಳಿಸಿದರು.
4.11ಲಕ್ಷ ಪಡಿತರ ಕಾರ್ಡ್ಗೆ ಅನುಮೋದನೆ: