ಬೆಂಗಳೂರು :ಬೆಂಗಾವಲು ವಾಹನ ಮತ್ತು ಸಿಬ್ಬಂದಿಯನ್ನು ಬಿಟ್ಟು ಗೌಪ್ಯ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದ್ದು, ಅಜ್ಞಾತ ಸ್ಥಳದಲ್ಲಿ ಸಚಿವ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಮತ್ತು ಆನಂದ್ ಸಿಂಗ್ ಭೇಟಿ ನಡೆಯಬೇಕಿತ್ತು. ಆದರೆ, ಸಿಎಂ ಸರಣಿ ಸಭೆ ಇದ್ದ ಕಾರಣಕ್ಕೆ ಆರ್ಟಿನಗರದಲ್ಲಿರುವ ಸಿಎಂ ನಿವಾಸದಿಂದ ಸ್ಥಳಾಂತರವಾಯಿತು. ಆದರೆ, ಕೊನೆ ಕ್ಷಣದಲ್ಲಿ ಆರ್ಟಿನಗರ ನಿವಾಸ ಬಿಟ್ಟು ಅಜ್ಞಾತ ಸ್ಥಳದಲ್ಲಿ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸರಣಿ ಸಭೆ ಮುಗಿಸಿ ಗೃಹ ಕಚೇರಿಯಿಂದ ಸಿಎಂ ಹೊರಟ ಕೆಲ ಸಮಯದಲ್ಲೇ ಎಸ್ಕಾರ್ಟ್ ಮತ್ತು ಸಿಬ್ಬಂದಿ ಗೃಹ ಕಚೇರಿಗೆ ಮರಳಿತು. ಆದರೆ, ಸಿಎಂ ಮಾತ್ರ ಗೌಪ್ಯ ಸ್ಥಳಕ್ಕೆ ತೆರಳಿದರು. ಅತ್ತ ಆನಂದ್ ಸಿಂಗ್ ಕೂಡ ವಸಂತನಗರ ನಿವಾಸದಿಂದ ಹೊರಟಿದ್ದು, ಎಲ್ಲಿ ಹೋದರು ಎನ್ನುವ ಮಾಹಿತಿ ಲಭ್ಯವಾಗಿಲ್ಲ.