ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಹಬ್ಬ ಆಚರಿಸಿ ಎಂದು ಕರೆ ನೀಡಿದ್ದಾರೆ.
ಕೋವಿಡ್ ಮುಕ್ತ ರಾಜ್ಯ ಮಾಡೋಣವೆಂದು ಸಂಕ್ರಾಂತಿ ಶುಭ ಕೋರಿದ ಸಿಎಂ ಬೊಮ್ಮಾಯಿ - ಬೆಂಗಳೂರು ಮಕರ ಸಂಕ್ರಾಂತಿ ಆಚರಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದ್ದಾರೆ..

ಬಸವರಾಜ ಬೊಮ್ಮಾಯಿ
ಸೂರ್ಯ ದೇವ ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥ ಬದಲಿಸುವ ಶುಭ ಸಂದರ್ಭವಿದು. ಈ ಕಾಲಘಟ್ಟದಲ್ಲಿ ರಾಜ್ಯದ ಜನತೆಯ ಹೊಸ ಕನಸು, ಆಸೆ-ಆಕಾಂಕ್ಷೆಗಳು ಈಡೇರಲಿ. ಎಲ್ಲರ ಬಾಳಲ್ಲಿ ಹೊಸ ಚೈತನ್ಯ ಮೂಡಲಿ..
ಸಂಕ್ರಮಣದ ಪರ್ವಕಾಲ ಎಲ್ಲರ ಬಾಳಲ್ಲಿ ಶುಭ ತರಲಿ, ಎಲ್ಲರೂ ಒಟ್ಟಾಗಿ ಕೋವಿಡ್ ವಿರುದ್ಧ ಹೋರಾಡಿ ಭಾರತ ಹಾಗೂ ಕರ್ನಾಟಕವನ್ನು ಕೋವಿಡ್ ಮುಕ್ತ ಮಾಡೋಣ ಎಂದು ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ.