ಕರ್ನಾಟಕ

karnataka

ETV Bharat / state

ಕಂಚು ಗೆದ್ದ ಕನ್ನಡಿಗ ಗುರುರಾಜ್​​ಗೆ ಸಿಎಂ ಅಭಿನಂದನೆ.. ಕ್ರೀಡಾ ಸಚಿವರಿಂದ 8 ಲಕ್ಷ ರೂ. ಪುರಸ್ಕಾರ ಘೋಷಣೆ - ಕಂಚು ಗೆದ್ದ ಕನ್ನಡಿಗ ಗುರುರಾಜ್​​ಗೆ 8 ಲಕ್ಷ ನಗದು ಪುರಸ್ಕಾರ ಘೋಷಣೆ

CWG-2022.. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಮಿಂಚಿದ ಕನ್ನಡಿಗ- ಪಿ. ಗುರುರಾಜ್​ ಪೂಜಾರಿ ಮುಡಿಗೆ ಕಂಚು- ಸಿಎಂ, ಸಚಿವರಿಂದ ಅಭಿನಂದನೆ- 8 ಲಕ್ಷ ರೂ. ನಗದು ಪುರಸ್ಕಾರ ಘೋಷಣೆ

cm-basavaraj-bommai-congrats-to-weightlifter-gururaj-poojary-for-winning-bronze-medal
ಕಂಚು ಗೆದ್ದ ಕನ್ನಡಿಗ ಗುರುರಾಜ್​​ಗೆ ಸಿಎಂ ಅಭಿನಂದನೆ, ಕ್ರೀಡಾ ಸಚಿವರಿಂದ 8 ಲಕ್ಷ ನಗದು ಪುರಸ್ಕಾರ ಘೋಷಣೆ

By

Published : Jul 30, 2022, 9:53 PM IST

ಬೆಂಗಳೂರು: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಪುರುಷರ 61 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಪಿ. ಗುರುರಾಜ್​ ಪೂಜಾರಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ಸಿಎಂ, ನಮ್ಮ ಹುಡುಗ ಗುರುರಾಜ್ ವೇಡ್​​ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವುದು ಸಂತೋಷವಾಗಿದೆ. ಇಡೀ ದೇಶ ಈ ಗೆಲುವನ್ನು ಸಂಭ್ರಮಿಸುತ್ತಿದೆ. ತಮ್ಮ ಪರಿಶ್ರಮ ಹಾಗೂ ಅಚಲ ನಿರ್ಧಾರದಿಂದ ಈ ಗೆಲುವು ಸಾಧಿಸಿರುವ ಗುರುರಾಜ್​ಗೆ ಅಭಿನಂದನೆಗಳು. ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿ ಎಂದು ಹಾರೈಸಿದರು.

8 ಲಕ್ಷ ನಗದು ಪುರಸ್ಕಾರ ಘೋಷಣೆ:ಕ್ರೀಡಾ ಸಚಿವ ಡಾ.ನಾರಾಯಣ ಗೌಡ ಕೂಡ ಕಂಚಿನ ಪದಕ ವಿಜೇತ ಕನ್ನಡಿಗ ಗುರುರಾಜ್​ ಪೂಜಾರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದು, 8 ಲಕ್ಷ ರೂ. ನಗದು ಪುರಸ್ಕಾರ ಘೋಷಿಸಿದ್ದಾರೆ. ಇದೇ ವೇಳೆ ಪುರುಷರ 55 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿರುವ ಸಂಕೇತ್ ಸರ್ಗರ್ ಅವರಿಗೂ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:CWG-2022: ವೇಟ್ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ.. ಕಂಚು ಗೆದ್ದ ಕನ್ನಡಿಗ ​

ABOUT THE AUTHOR

...view details