ಬೆಂಗಳೂರು: ನಾಡಿನ ಸಮಸ್ತ ಜನರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೂ ಸೇನಾ ದಿನದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಭೂ ಸೇನಾ ದಿನದ ಶುಭಾಶಯ ಕೋರಿ ಸಿಎಂ ಯಡಿಯೂರಪ್ಪ ಟ್ವೀಟ್.. - CM B. S Yediyurappa latest news
ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು ಎಂದು ಸಿಎಂ ಯಡಿಯೂರಪ್ಪ ಟ್ವಿಟರ್ ಮೂಲಕ ಭೂ ಸೇನಾ ದಿನದ ಶುಭಾಶಯ ಕೋರಿದ್ದಾರೆ.
ಯಡಿಯೂರಪ್ಪ
1949 ಜ.15ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿ ಕನ್ನಡಿಗನಿಗೂ ಹೆಮ್ಮೆ. ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.