ಕರ್ನಾಟಕ

karnataka

By

Published : Jan 30, 2020, 1:10 PM IST

ETV Bharat / state

ಗಾಂಧಿಯವರ ತತ್ವ, ಆದರ್ಶಗಳನ್ನು ನಾವೆಲ್ಲರೂ ಅನುಸರಿಸಬೇಕು: ಸಿಎಂ

ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ಅಂಗವಾಗಿ ಇಂದು ಸಿಎಂ ಯಡಿಯೂಪ್ಪ ವಿಧಾನಸೌಧ ಆವರಣದಲ್ಲಿರುವ ಧ್ಯಾನಸ್ಥ ಗಾಂಧಿ ಪ್ರತಿಮೆ ಬಳಿ ತೆರಳಿ ಪುಷ್ಪನಮನ ಸಲ್ಲಿಸಿದರು.

mahatma gandhi
ಮಹಾತ್ಮ ಗಾಂಧೀಜಿ

ಬೆಂಗಳೂರು:ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳನ್ನು ಅನುಸರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಸಿಎಂ ಬಿ.ಎಸ್​.ಯಡಿಯೂರಪ್ಪ

ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆ ದಿನದ ಅಂಗವಾಗಿ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿರುವ ಧ್ಯಾನಸ್ಥ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದ ಹಾಗೂ ಅದರಂತೆ ಬದುಕಿ ತೋರಿಸಿದ ಮಹಾನ್ ವ್ಯಕ್ತಿ ಗಾಂಧೀಜಿ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹಾಗೂ ಸರ್ವ ಜನಾಂಗದ ಏಳಿಗೆಗಾಗಿ ಶ್ರಮಿಸಿ ದುಡಿದದ್ದು ಒಂದು ಇತಿಹಾಸ. ಅವರು ಒಬ್ಬ ವ್ಯಕ್ತಿಯಾಗಿರದೆ ಮಹಾನ್ ಚೇತನವಾಗಿದ್ದರು. ಜನಸೇವೆ, ಸರಳತೆ, ಸ್ವಚ್ಛತೆ ಅವರ ಜೀವನ ಕ್ರಮವಾಗಿತ್ತು. ಸಮಾನತೆ ಹಾಗೂ ಸಹಿಷ್ಣುತೆಯ ಅಂಶ ಹೊಂದಿದ್ದರು. ಗ್ರಾಮ ಸ್ವರಾಜ್ ಕನಸು ಕಂಡಿದ್ದ ಅವರು, ಗ್ರಾಮೀಣ ಬದುಕಿನ ಉನ್ನತೀಕರಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ನಂಬಿದ್ದರು ಎಂದರು.

ಗಾಂಧೀಜಿಯವರ ತತ್ವ, ಆದರ್ಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಕೊಡುಗೆಯನ್ನು ಆಧರಿಸಿ ಅನುಸರಿಸಬೇಕು. ಇಂದು ಗಾಂಧೀಜಿ ನಮ್ಮ ಬದುಕಿನ ಸ್ಫೂರ್ತಿಯಾಗಿದ್ದಾರೆ. ಅವರ ವಿಚಾರಧಾರೆಗಳು ಸಾರ್ವಕಾಲಿಕ ಹಾಗೂ ಪ್ರಸ್ತುತ. ಜಾತ್ಯತೀತ ಹಾಗೂ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿದ ಅವರ ತತ್ವವನ್ನು ನಾವೆಲ್ಲರೂ ಪಾಲಿಸಬೇಕು ಎಂದರು.

ABOUT THE AUTHOR

...view details