ಬೆಂಗಳೂರು :ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ನಾಟಕ ಭವನದಲ್ಲಿ ನಿರ್ಮಾಣವಾಗುತ್ತಿರುವ 120 ಕೋಟಿ ವೆಚ್ಚದ ಹೊಸ ಕಟ್ಟಡದ ಕಾಮಾಗಾರಿಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪರಿಶೀಲಿಸಿದರು.
ದೆಹಲಿ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ, ಇಲ್ಲಿನ ನಿರ್ಮಾಣವಾಗ್ತಿರುವ ಕರ್ನಾಟಕ ಭವನದ ನೂತನ ಕಟ್ಟಡಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಕಾಲಮಿತಿಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಮುಗಿಸುವಂತೆ ಸೂಚಿಸಿದರು.
ಕರ್ನಾಟಕ ಭವನ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಸಿಎಂ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ಭವನ-1 ಕಾವೇರಿ ಕಟ್ಟಡ ಎರಡು ತಳ ಮಹಡಿಗಳನ್ನು ಒಳಗೊಂಡಿರಲಿದೆ. ನೆಲ ಮಹಡಿ, ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳನ್ನು ಹೊಂದಿರಲಿದೆ. ಆರಂಭದಲ್ಲಿ ₹87 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತಾದರೂ ನಂತರ ಯೋಜನಾ ಮೊತ್ತವನ್ನು ₹120 ಕೋಟಿಗೆ ಪರುಷ್ಕರಿಸಲಾಗಿದೆ.
ಇದನ್ನೂ ಓದಿ : ವೈರಲ್ ಆದ ಆಡಿಯೋ, ದರ್ಶನ್ ಕ್ಷಮೆ ಕೇಳಬೇಕು : ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಗ್ರಹ