ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣಾ ಅಡ್ವಾಣಿ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶುಭ ಕೋರಿದ್ದಾರೆ.
ಪಕ್ಷದ ಹಿರಿಯ ನೇತಾರ, ಮಾಜಿ ಉಪಪ್ರಧಾನಮಂತ್ರಿ, ಪದ್ಮವಿಭೂಷಣ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ ಆದರ ಪೂರ್ವಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಭಾರತೀಯ ರಾಜಕಾರಣದ ಮೇಲೆ ಅಡ್ವಾಣಿ ಅವರ ಅಗಾಧ ಪರಿಣಾಮವಿದೆ. ಅನೇಕ ಕಾರ್ಯಕರ್ತರಿಗೆ ಅದ್ಭುತ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಜನ್ಮದಿನದಂದು ಅವರಿಗೆ ಹೃತ್ಪೂರ್ವಕ ಶುಭಾಶಯಗಳು. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ. ಜೈ ಶ್ರೀ0ರಾಮ್ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಸೇರಿದಂತೆ ಯಡಿಯೂರಪ್ಪ ಸಂಪುಟದ ಸದಸ್ಯರು ಶುಭ ಕೋರಿದ್ದಾರೆ.
ಭಾರತದ ಮುತ್ಸದ್ದಿ ರಾಜಕಾರಣಿ, ಮಾಜಿ ಉಪ ಪ್ರಧಾನಿ, ತತ್ವನಿಷ್ಠ ನಾಯಕ, ಭಾರತೀಯ ಜನತಾ ಪಕ್ಷದ ಅಗ್ರಗಣ್ಯ ನೇತಾರ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.