ಕರ್ನಾಟಕ

karnataka

1 ಗಂಟೆ ತಡವಾಗಿ ಸಿಎಲ್​ಪಿ ಸಭೆ ಆರಂಭ.. ಸದನದಲ್ಲಿ ನಡೆಯಲಿದೆಯಾ ಹೈಡ್ರಾಮಾ?

By

Published : Jul 29, 2019, 10:49 AM IST

9 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ 1 ಗಂಟೆ ತಡವಾಗಿ ಆರಂಭವಾಗಿದೆ. ಇಂದಿನ ವಿಶ್ವಾಸಮತ ಸಾಬೀತು ಸಂದರ್ಭ ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸಭಾತ್ಯಾಗ ಮಾಡಲು ನಿರ್ಧರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ.

ಸಿಎಲ್​ಪಿ ಸಭೆ ಆರಂಭ

ಬೆಂಗಳೂರು: ವಿಧಾನಸೌಧದಲ್ಲಿ 9 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ 1 ಗಂಟೆ ತಡವಾಗಿ ಆರಂಭವಾಗಿದೆ.

ಶಾಸಕಾಂಗ ಸಭೆಯಲ್ಲಿ ಎಲ್ಲರೂ ಒಗ್ಗಟ್ಟಾಗಿರುವ ನಿರ್ಣಯ ಕೈಗೊಳ್ಳಲಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ವೈದ್ಯರ ಸಲಹೆ ಪಡೆದು ಬರುವ ಸಾಧ್ಯತೆ ಇದೆ. ಪಕ್ಷ ಬಯಸಿದಲ್ಲಿ, ಸಂಖ್ಯಾಬಲ ಅಗತ್ಯ ಎದುರಾದರೆ ಬರುವ ಸಾಧ್ಯತೆ ಇದೆ.

ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ಸಾಬೀತು ಸಂದರ್ಭ ಉಪಸ್ಥಿತರಿರುವುದೋ ಅಥವಾ ಸಭಾತ್ಯಾಗ ಮಾಡುವುದೋ ಎಂಬ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ.

ಸಿಎಲ್​ಪಿ ಸಭೆ ಆರಂಭ..

ಸದನದಲ್ಲಿ ನಡೆಯಲಿದೆ ಹೈಡ್ರಾಮಾ :

ಇಂದಿನ ವಿಶ್ವಾಸಮತ ಸಾಬೀತು ಸಂದರ್ಭ ಸಂಖ್ಯಾಬಲ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಸಭಾತ್ಯಾಗ ಮಾಡಲು ನಿರ್ಧರಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿಯ ನಿಲುವನ್ನು ವಿರೋಧಿಸಿ ಕೈ ಶಾಸಕರು ಸಭಾತ್ಯಾಗ ಮಾಡುವ ಚಿಂತನೆ ನಡೆಸಿದ್ದಾರೆ. ಆಪರೇಷನ್ ಕಮಲ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ಎಂಬ ಕಾರಣಕ್ಕೆ ಸಭಾತ್ಯಾಗ ಸಾಧ್ಯತೆ ಬಗ್ಗೆ ಸಿಎಲ್​ಪಿಯಲ್ಲಿ ಚರ್ಚೆ ನಡೆಯುತ್ತಿದೆಯಂತೆ. ಸಭಾತ್ಯಾಗ ಮಾಡುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಲು ಕೈ ನಾಯಕರು ಚಿಂತಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details