ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಭಾಗವಾಗಿ ಅಗರ ಕೆರೆ ದ್ವಾರದಿಂದ ಪ್ಲಾಗ್ ರನ್ ನಡೆಸಲಾಯಿತು.
ಹೆಚ್ಎಸ್ಆರ್ ಸಿಟಿಜನ್ಸ್ ಫೋರಂ, ಇಂಡಿಯನ್ ಬ್ಲಾಗರ್ಸ್ ಆರ್ಮಿ ಹಾಗೂ ಜರ್ಕಾ ಅಸೋಸಿಯೇಷನ್ ಸಹಯೋಗದೊಂದಿಗೆ ಪಾಲಿಕೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಘನತ್ಯಾಜ್ಯ ವಿಶೇಷ ಆಯುಕ್ತರಾದ ರಂದೀಪ್ ಅವರು ಚಾಲನೆ ನೀಡಿದರು.
ಸಿಲಿಕಾನ್ ಸಿಟಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಬಳಿಕ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣ್ ಭಾಗವಾಗಿ ಪ್ಲಾಗ್ ರನ್ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಬಹಳ ಮುಖ್ಯವಾಗಿದೆ. ನಗರದ ಸ್ವಚ್ಛತೆ ಕೇವಲ ಬಿಬಿಎಂಪಿ, ಮಾರ್ಷಲ್ಸ್ರಿಂದ ಸಾಧ್ಯವಿಲ್ಲ.
ನಾಗರಿಕರ ಬೆಂಬಲವೂ ಬೇಕಿದೆ. ಪ್ರತಿಯೊಬ್ಬರೂ ಸ್ವಚ್ಛ ಬೆಂಗಳೂರು ಮಾಡಲು ಪಣತೊಡಬೇಕು. ಈ ಬದಲಾವಣೆ ಸಣ್ಣ ಗುಂಪಿನಿಂದ ಆರಂಭವಾಗಿ ಇತರರಲ್ಲೂ ತರಬಹುದು ಎಂದರು.
ಸಿಲಿಕಾನ್ ಸಿಟಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ ಪ್ಲಾಗ್ ರನ್ ಮಾಡುವುದರಿಂದ ಎಷ್ಟೆಲ್ಲ ಅನಗತ್ಯ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ ಎಂಬ ಅರಿವು ಮೂಡಲಿದೆ. ಇದರಿಂದ ಮರುಬಳಕೆ ಮಾಡುವ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಉತ್ತೇಜನ ಸಿಗಲಿದೆ.
ಈ ಅಭಿಯಾನದ ಅಂಗವಾಗಿ ನಾಗರಿಕರಿಂದ 97 ಸಾವಿರ ಫೀಡ್ಬ್ಯಾಕ್ ಬಂದಿದೆ. ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಾಮಾಣಿಕ ವಿಮರ್ಶೆ ನೀಡಬಹುದು. ಮಾರ್ಚ್ ಅಂತ್ಯದಲ್ಲಿ 1.5 ಲಕ್ಷ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಗುರಿ ಹೊಂದಲಾಗಿದೆ ಎಂದರು.