ಬೆಂಗಳೂರು: ನಗರದ ಸ್ವಚ್ಛತೆಗಾಗಿ ಪಾಲಿಕೆಯ ಎಲ್ಲ ಅಧಿಕಾರಿಗಳು ಹಾಗೂ ಶುಚಿ ಮಿತ್ರರು ಕಾರ್ಯನಿರ್ವಹಿಸುತ್ತಿದ್ದು, ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ನಾಗರಿಕರು, ಇದಕ್ಕೆ ಸಹಕಾರ ನೀಡಿದರೆ ‘ಸ್ವಚ್ಛ ಬೆಂಗಳೂರು’ ನಿರ್ಮಾಣ ಸಾಧ್ಯವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ನಾಗರಿಕರಲ್ಲಿ ಮನವಿ ಮಾಡಿದರು.
ಪಾಲಿಕೆಯ ಎಲ್ಲಾ ವಲಯ, ವಿಭಾಗೀಯ ಹಾಗೂ ವಾರ್ಡ್ ಮಟ್ಟದಲ್ಲಿನ ಸಂಯೋಜಕರು, ಬ್ಲಾಕ್ ಮಟ್ಟಡಲ್ಲಿ ಶುಚಿ ಮಿತ್ರರು ಹಾಗೂ ಲೇನ್ ಮಟ್ಟದಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳ ಜತೆಗೆ, ನಾಗರಿಕರ ಸಹಕಾರ ಹಾಗೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಸ್ವಚ್ಛ ಬೆಂಗಳೂರನ್ನು ನಿರ್ಮಿಸಬಹುದು ಎಂದು ಸಲಹೆ ನೀಡಿದರು.
ಟೌನ್‌ಹಾಲ್ ಸಮೀಪದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಗರದ ಸ್ವಚ್ಛತೆ(ಶುಚಿತ್ವ)ಗಾಗಿ ನಾಗರಿಕರ ಸಹಭಾಗಿತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಾಲಿಕೆಯು, ನಾಗರಿಕರ ಜತೆಗೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅದನ್ನು ಸರಿಯಾಗಿ ಮುಂದುವರಿಸಿಕೊಂಡು ಹೋಗುವ ಅವಶ್ಯಕತೆಯಿದೆ. ತಳಮಟ್ಟದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದನ್ನು ಸುಧಾರಣೆ ಮಾಡುವ ಕೆಲಸ ಆಗಬೇಕು. ತ್ಯಾಜ್ಯ ವಿಲೇವಾರಿಯಲ್ಲಿ ಜನರ ಸಹಭಾಗಿತ್ವ, ಪಾಲ್ಗೊಳ್ಳುವಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬರುವ ದಿನಗಳಲ್ಲಿ ಕಸ ವಿಲೇವಾರಿಗೆ ನಾಗರಿಕರ ಕೈಜೋಡಿಸುವಿಕೆಯೂ ಬೇಕಾಗಿದೆ. ವಲಯ, ವಾರ್ಡ್ ಮಟ್ಟದಲ್ಲಿ ಜನರ ಜತೆಗೆ ಸೇರಿ ಬಿಬಿಎಂಪಿ ಕೆಲಸ ಮಾಡಲಿದೆ. ಯಾರ್ಯಾರು, ಯಾವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಬಗ್ಗೆ ಸಭೆ ನಡೆಸಲಾಗಿದೆ ಎಂದು ಹೇಳಿದರು.
ತ್ಯಾಜ್ಯ ವಿಂಗಡಣೆ ಕಡ್ಡಾಯ: