ಬೆಂಗಳೂರು: ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ಗುಣಗಳಿರುವ ವಿಚಾರಗಳಿಗೆ ಹಿಂದಿನಿಂದಲೂ ಹೆಚ್ಚು ಮೌಲ್ಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಕಾನೂನು ಮತ್ತು ಸಂಸದೀಯ ಸುಧಾರಣಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಹೊರತಂದಿರುವ ಶಾಸ್ತ್ರೀಯ ಭಾಷಾ ಯೋಜನೆಯ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಈಗ ಕ್ರೋಢೀಕರಿಸಿದ ಶಾಸನ ರಚನೆ ಹಾಗೂ ನ್ಯಾಯದಾನದ ವ್ಯವಸ್ಥೆ ಇದೆ. ಕ್ರೋಢೀಕರಣ ಆಗದಿದ್ದರೂ ಕೂಡ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ರಾಜರ ಕಾಲದಲ್ಲಿ ನ್ಯಾಯದಾನ, ರಾಣಿಯರ ಆಡಳಿತದ ಪರಂಪರೆಯ ವಿಚಾರಗಳು ಈ ಪುಸ್ತಕಗಳಲ್ಲಿ ಬಂದಿರುವುದು, ಕಾನೂನು ಆಸಕ್ತಿ ಇರುವವರಿಗೆ ಮಾರ್ಗದರ್ಶಿಯಾಗಲಿದೆ ಎಂದು ಹೇಳಿದರು.