ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಚಾಕು ಇರಿತದೊಂದಿಗೆ ಅಂತ್ಯವಾದ ಘಟನೆ ಶನಿವಾರ ತಡರಾತ್ರಿ ಪೀಣ್ಯಾ 4ನೇ ಹಂತದಲ್ಲಿ ನಡೆದಿದೆ. ಅದೃಷ್ಟವಶಾತ್ ಇರಿತಕ್ಕೊಳಗಾದ ಪ್ರಶಾಂತ್ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿ ಪ್ರಶಾಂತ್ ಎಂಬಾತನನ್ನ ಪೀಣ್ಯಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಾಳು ಹಾಗೂ ಆರೋಪಿ ಇಬ್ಬರೂ ಸ್ನೇಹಿತರಾಗಿದ್ದು, ಜೊತೆಯಾಗಿ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಇಬ್ಬರೂ ತಡರಾತ್ರಿ ರೂಮಿನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮದ್ಯಪಾನ ಮಾಡಿದ್ದಾರೆ.