ಬೆಂಗಳೂರು :ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಯುವತಿಯರ ತಂಡವೊಂದು ನಿನ್ನೆ ಮಧ್ಯಾಹ್ನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ರೈಡ್‌ಗೆ ಹೋಗಿತ್ತು. ಮಾರ್ಗ ಮಧ್ಯೆೆ ಒಂದೆಡೆ ಬೈಕ್‌ಗಳನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯಾದ ವ್ಯಕ್ತಿಯೊಬ್ಬ ಬೈಕ್‌ಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗುವಂತೆ ಸೂಚಿಸಿ, ನಿಂದಿಸಿದ್ದಾನೆ ಎಂದು ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಯುವತಿಯರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. "ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದಾಗ ಆಗಮಿಸಿದ ವ್ಯಕ್ತಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಿ ನಮ್ನನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾನೆ. ಇದು ನನ್ನ ಜಾಗ, ನೀವು ಇಲ್ಲಿರಬಾರದು ಎಂದು ಬೈಕ್ ಕೀ ಕಿತ್ತುಕೊಂಡು, ನಾನು ಅಡ್ವೊಕೇಟ್ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಧಮ್ಕಿ ಹಾಕಿದ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದರೂ ಆ ವ್ಯಕ್ತಿ ಕೀ ಕೊಡಲಿಲ್ಲ" ಎಂದು ಬೈಕರ್ ಪ್ರಿಯಾಂಕ ತಿಳಿಸಿದ್ದಾರೆ.
ಆರೋಪ ಹೊತ್ತಿರುವ ವ್ಯಕ್ತಿಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. "ಯುವತಿಯರು ಬೈಕ್ ನಿಲುಗಡೆ ಮಾಡಿದ ರಸ್ತೆ ಪಕ್ಕದಲ್ಲೇ ನನಗೆ ಸೇರಿದ ಜಾಗವಿದೆ. ಹೀಗಾಗಿ ಅಲ್ಲಿಂದ ತೆರಳಲು ಸೂಚಿಸಿದ್ದೆ" ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಎಲ್ಲೆೆಡೆ ಹರಡುತ್ತಿದ್ದಂತೆ ತಡರಾತ್ರಿ ಕೋಣನಕುಂಟೆ ಪೊಲೀಸ್ ಠಾಣೆಯ ಮುಂದೆ ಹಲವು ಬೈಕ್ ರೈಡರ್ಸ್ ಜಮಾಯಿಸಿದ್ದರು. ದೂರು- ಪ್ರತಿದೂರುಗಳು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.