ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ

ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Clash among workers  Congress Vijaya Sankalpa camp workshop  Clash among congress workers at Bengaluru  ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ  ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರ  ಪಕ್ಷದ ಎರಡು ಬಣಗಳ ನಡುವೆ ತೀವ್ರ ಮಾರಾಮಾರಿ  ಬೆಂಗಳೂರಿನ ದಾಸರಹಳ್ಳಿಯ ಎನ್​ಟಿಟಿಎಫ್​ ಜಿಮ್‌ಖಾನ ಕ್ಲಬ್​ ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯ
ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ

By

Published : Nov 10, 2022, 1:00 PM IST

ಬೆಂಗಳೂರು: ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಪಕ್ಷದ ಎರಡು ಬಣಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ದಾಸರಹಳ್ಳಿಯ ಎನ್​ಟಿಟಿಎಫ್​ ಜಿಮ್‌ಖಾನ ಕ್ಲಬ್​ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಾಸರಹಳ್ಳಿ ಉಸ್ತುವಾರಿ ಡಾ. ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಕಾಂಗ್ರೆಸ್ ಮುಖಂಡ ಪಿ‌.ಎನ್ ಕೃಷ್ಣ ಮೂರ್ತಿಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ಕೆರಳಿದ ಪಿ‌ಎನ್ ಕೃಷ್ಣಮೂರ್ತಿ ಬೆಂಬಲಿಗರು ಸಭೆ ನಡೆಯುತ್ತಿದ್ದ ಸ್ಥಳಕ್ಕ ಆಗಮಿಸಿ ಗಲಾಟೆ ನಡೆಸಿದರು ಎಂಬ ಆರೋಪ ಕೇಳಿಬಂದಿದೆ.

ಗಲಾಟೆ ವೇಳೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಕುರಿತು ಪೀಣ್ಯ ಪೋಲಿಸ್ ಠಾಣೆಯಲ್ಲಿ ದೂರ ದಾಖಲು ಮಾಡಲಾಗಿದೆ. ಕೆಪಿಸಿಸಿ ಸದಸ್ಯರಾಗಿರುವ ಪಿಎನ್ ಕೃಷ್ಣಮೂರ್ತಿಯನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರು ಗಲಾಟೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ

ಸಭಾಂಗಣದ ಸ್ಥಳ ಇಕ್ಕಟ್ಟಾಗಿದ್ದರಿಂದ ಗಲಾಟೆ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಓದಿ:ಟಿಪ್ಪು ಜಯಂತಿಗೆ ಶ್ರೀರಾ‌ಮ ಸೇನೆ ವಿರೋಧ: ಚೆನ್ನಮ್ಮ ವೃತ್ತದಲ್ಲಿ ಹೈಡ್ರಾಮ

ABOUT THE AUTHOR

...view details