ಕರ್ನಾಟಕ

karnataka

ETV Bharat / state

ಪ್ರವಾಹ ಪೀಡಿತರಿಗಾಗಿ ಅಗಸ್ಟ್‌ 14ಕ್ಕೆ ಪಾದಯಾತ್ರೆ.. ಮುರುಗೇಶ್ ಜವಳಿ - ಉತ್ತರ‌ ಕರ್ನಾಟಕ

ಉತ್ತರ‌ಕರ್ನಾಟಕದ ಮಹಾ ಮಳೆಗೆ ನಲುಗಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಉತ್ತರ ಕರ್ನಾಟಕದ ನಾಗರಿಕ ಅಭಿವೃದ್ದಿ ಸಂಘ ಮುಂದಾಗಿದ್ದು, ನೆರೆ ಸಂತ್ರಸ್ತರ‌ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದೆ.

ಉತ್ತರ ಕರ್ನಾಟಕದ ನಾಗರೀಕ ಅಭಿವೃದ್ದಿ ಸಂಘ

By

Published : Aug 9, 2019, 1:36 PM IST

ಬೆಂಗಳೂರು:ಉತ್ತರ‌ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಉತ್ತರ ಕರ್ನಾಟಕದ ನಾಗರಿಕ ಅಭಿವೃದ್ದಿ ಸಂಘ ಮುಂದಾಗಿದ್ದು, ನೆರೆ ಸಂತ್ರಸ್ತರ‌ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ್ದು, ಸಂಘದ ಅಧ್ಯಕ್ಷರಾದ ಮುರುಗೇಶ್ ಜವಳಿ ಮಾತನಾಡಿ ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತ ಚಾಚುವಂತೆ ಮನವಿ‌ ಮಾಡಿದ್ದು, ಈ‌ ನಿಟ್ಟಿನಲ್ಲಿ ಅಗಸ್ಟ್‌ 14ರಂದು ಪಾದಯಾತ್ರೆಯ ಮೂಲಕ ಅಗತ್ಯ ವಸ್ತುಗಳನ್ನ ಹಾಗೂ ಹಣ ಸಂಗ್ರಹ ಕೆಲಸಕ್ಕೆ‌ ಮುಂದಾಗುತ್ತಿದ್ದೇವೆ ಎಂದರು.

ಅಂದು ಟೌನ್ ಹಾಲ್​ನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ವೇಳೆ ಸಾರ್ವಜನಿಕರು ಸಹಾಯ ಹಸ್ತ ಚಾಚುವಂತೆ ಸಾರ್ವಜನಿಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಮೂಲದ ನಟ ನಟಿಯರು, ಉದ್ಯಮಿಗಳು, ಐಟಿ ಬಿಟಿ ಉದ್ಯೋಗಿಗಳು ಸಹಾಯ ಮಾಡಬೇಕಾಗಿದೆ ಎಂದರು.

ABOUT THE AUTHOR

...view details