ಬೆಂಗಳೂರು :ಲಾಕ್ಡೌನ್ನಿಂದಾಗಿ ಕೆಲಸ, ಆಹಾರವಿಲ್ಲದೇ ಪರದಾಡುತ್ತಿರುವ ಲಕ್ಷಾಂತರ ವಲಸೆ ಕಾರ್ಮಿಕರಿಗೆ ವಾರ್ತಾ ಇಲಾಖೆ ನೆರವು ನೀಡುತ್ತಿದ್ದು, ಇದಕ್ಕೆ ಇನ್ನಷ್ಟು ಸಹಕಾರ ನೀಡಲು ಸಿವಿಲ್ ಡಿಫೆನ್ಸ್ ಮುಂದಾಗಿದೆ.
ಕೂಲಿ ಕಾರ್ಮಿಕರಿಗೆ ಊಟ: ವಾರ್ತಾ ಇಲಾಖೆ ಜೊತೆ ಕೈ ಜೋಡಿಸಿದ ಸಿವಿಲ್ ಡಿಫೆನ್ಸ್ - ಬೆಂಗಳೂರು ಲೇಟೆಸ್ಟ್ ನ್ಯೂಸ್
ಕೊರೊನಾ ನಿಯಂತ್ರಿಸಲು ಸರ್ಕಾರ ಮತ್ತೆ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ಇದರಿಂದ ಕೂಲಿ ಕಾರ್ಮಿಕರು ಆಹಾರ, ಕೆಲಸವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇವರ ನೆರವಿಗೆ ಬಂದಿರುವ ವಾರ್ತಾ ಇಲಾಖೆಗೆ ಜೊತೆಗೆ ಇದೀಗ ಸಿವಿಲ್ ಡಿಫೆನ್ಸ್ ಕೈ ಜೋಡಿಸಿದ್ದು, ಸಹಾಯಕ್ಕೆ ಮುಂದಾಗಿದೆ.
ನಗರದ ಗಲ್ಲಿ ಗಲ್ಲಿಗಳಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡಲು ವಾರ್ತಾ ಇಲಾಖೆ ಟಾಸ್ಕ್ಪೋರ್ಸ್ ರಚಿಸಿದ್ದು, ಇದಕ್ಕೆ ಸದಸ್ಯೆ ಮಾಳವಿಕ ಅವಿನಾಶ್ ಚಾಲನೆ ನೀಡಿದರು. ಇನ್ನುಟಾಸ್ಕ್ಪೋರ್ಸ್ನಲ್ಲಿರುವ ಸದಸ್ಯರು, ಬೈಕ್ ಮೂಲಕ ತೆರಳಿ ಕಾರ್ಮಿಕರಿಗೆ ಊಟ ಸರಬರಾಜು ಮಾಡುತ್ತಿದ್ದಾರೆ. ಇದಕ್ಕೆ ಅಗರವಾಲ್ ಹಾಗೂ ಜೈನ್ ಸಮಾಜ ಸಾಥ್ ನೀಡಿವೆ.
ಈವರೆಗೂ ಕಾರ್ಮಿಕ ಇಲಾಖೆ, ವಾರ್ತಾ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಿತ್ಯ 2 ಲಕ್ಷ ಕಾರ್ಮಿಕರಿಗೆ ಅನ್ನ ದಾಸೋಹ ಮಾಡಲಾಗಿದ್ದು, ಇದೀಗ ವಾರ್ತಾ ಇಲಾಖೆ ಹಾಗೂ ಸಿವಿಲ್ ಡಿಫೆನ್ಸ್ ನಮ್ಮ ಯೋಜನೆಯನ್ನು ಸಫಲಗೊಳಿಸಲು ಮುಂದೆ ಬಂದಿರುವುದು ಸಂತಸದ ವಿಷಯವಾಗಿದೆ ಎಂದು ಜೈನ್ ಸಮುದಾಯದ ಮುಖಂಡ ಹೇಮಂತ್ ಹೇಳಿದರು.