ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಭಾಸ್ಕರ್ ರಾವ್ ಅವರನ್ನು ಬದಲಾಯಿಸಿ ಕಮಲ್ ಪಂತ್ ಅವರನ್ನು ನೂತನ ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸಿದ ಹತ್ತು ದಿನಗಳಲ್ಲೇ ರಾಜಧಾನಿಯಲ್ಲಿ ಗಲಭೆ ಎದ್ದಿದೆ. ಈ ಗಲಭೆ ಹಾಗೂ ಈಗಿರುವ ಪರಿಸ್ಥಿತಿಯನ್ನ ಕಮಲ್ ಪಂತ್ ಇದನ್ನ ನಿಭಾಯಿಸುವುದು ಅನಿವಾರ್ಯವಾಗಿದೆ. ಆದರೆ, ಇದೇ ವಿಚಾರ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ನೂತನ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಕಮಲ್ ಪಂತ್ ಅವರು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿ ಬಹಳಷ್ಟು ಹೆಸರು ಮಾಡಿದವರು. ರಾಜ್ಯದಲ್ಲಿ ಕೋಮುಗಲಭೆ, ಜಾತಿ ವೈಷಮ್ಯದ ಗಲಭೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ನಗರ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಆಯುಕ್ತರಿಗೆ ಘಟನೆ ನಡೆಯುವ ವಿಚಾರ ಯಾಕೆ ಮೊದಲೇ ಗೊತ್ತಾಗಿಲ್ಲ ಅನ್ನೋ ಪ್ರಶ್ನೇ ಎದ್ದಿದೆ.